Home LATEST NEWS kannada ಇತ್ತೀಚಿನ ಸುದ್ದಿ ಮನೆ ಬಾಗಿಲಿಗೆ ಹೋದರೂ ಸಿಗಲಿಲ್ಲ ಬಿಜೆಪಿ ಶಾಸಕರು, ಸಂಸದರು: ಉ.ಕನ್ನಡ ಬಿಜೆಪಿ ಅಭ್ಯರ್ಥಿ ಕಾಗೇರಿಗಿಲ್ಲ ಅಸಮಾಧಾನಿತರ...

ಮನೆ ಬಾಗಿಲಿಗೆ ಹೋದರೂ ಸಿಗಲಿಲ್ಲ ಬಿಜೆಪಿ ಶಾಸಕರು, ಸಂಸದರು: ಉ.ಕನ್ನಡ ಬಿಜೆಪಿ ಅಭ್ಯರ್ಥಿ ಕಾಗೇರಿಗಿಲ್ಲ ಅಸಮಾಧಾನಿತರ ಬೆಂಬಲ!

1
0

Source :- ONE INDIA NEWS

Karnataka

oi-Sunitha B

|

Published: Thursday, March 28, 2024, 16:49 [IST]

Google Oneindia Kannada News

ಕರ್ನಾಟಕ
ವಿಧಾನ
ಸಭೆಯ
ಸ್ಪೀಕರ್
ಆಗಿದ್ದ
ವಿಶ್ವೇಶ್ವರ
ಹೆಗಡೆ
ಕಾಗೇರಿ
ಅವರು
ಉತ್ತರ
ಕನ್ನಡ
ಕ್ಷೇತ್ರದಿಂದ
ಲೋಕಸಭೆಗೆ
ಸ್ಪರ್ಧಿಸಲು
ಬಿಜೆಪಿ
ಟಿಕೆಟ್
ಪ್ರಕಟವಾಗಿದೆ.
ಹೀಗಾಗಿ
ಉತ್ತರ
ಕನ್ನಡದಲ್ಲಿ
ಅಸಮಾಧಾನದ
ಹೊಗೆ
ಆಡತೊಡಗಿದೆ.
ಟಿಕೆಟ್
ಕೈತಪ್ಪಿದ್ದ
ಆಕಾಂಕ್ಷಿಗಳನ್ನು
ವಿಶ್ವಾಸಕ್ಕೆ
ಪಡೆದು
ಪ್ರಚಾರಕ್ಕಿಳಿಯಲು
ಮುಂದಾದ
ಕಾಗೇರಿ
ಪ್ರಯತ್ನ
ವಿಫಲವಾಗಿದೆ.

ಆರು
ಸಲ
ಸಂಸದರಾಗಿದ್ದ
ಅನಂತಕುಮಾರ
ಹೆಗಡೆ
ಅವರು
ಉತ್ತರ
ಕನ್ನಡದಲ್ಲಿ
ಟಿಕೆಟ್
ಆಕಾಂಕ್ಷಿಯಾಗಿದ್ದರು.
ಆದರೆ
ಟಿಕೆಟ್
ಕೈತಪ್ಪಿದ್ದರಿಂದ
ಅನಂತಕುಮಾರ
ಹೆಗಡೆ
ಅವರು
ಕಾರ್ಯಕರ್ತರು
ಮಾತ್ರವಲ್ಲದೆ
ಯಾರ
ಸಂಪರ್ಕಕ್ಕೂ
ಸಿಗುತ್ತಿಲ್ಲ.
ಇದರಿಂದ
ವಿಶ್ವೇಶ್ವರ
ಹೆಗಡೆ
ಕಾಗೇರಿಗೆ
ಸಂಕಷ್ಟ
ಎದುರಾಗಿದೆ.

Uttara Kannada BJP candidate Vishweshwar Kageri has no support from the disgruntled

ಅನಂತಕುಮಾರ್
ಹೆಗಡೆ
ಮನವೊಲಿಸಲು
ಅವರ
ಮನೆ
ಬಳಿ
ಹೋಗಿ
ಕಾಗೇರಿ
ಅರ್ಧ
ಗಂಟೆ
ಕಾದರೂ
ಸೌಜನ್ಯಕ್ಕೂ
ಗೇಟ್
ತೆರೆಸಿ
ಅವರ
ಬಳಿ
ಮಾತನಾಡಿಲ್ಲ
ಎಂಬುದು
ಗೊತ್ತಾಗಿದೆ.
ಇವರೊಂದಿಗೆ
ಯಲ್ಲಾಪುರ
ಶಾಸಕ
ಶಿವರಾಂ
ಹೆಬ್ಬಾರ್‌
ಕೂಡ
ಕಾಗೇರಿ
ಅವರ
ಸಂಪರ್ಕಕ್ಕೆ
ಸಿಗುತ್ತಿಲ್ಲ.
ಇದು
ಕಾಗೇರಿ
ಅವರಿಗೆ
ಸೋಲಿನ
ಭೀತಿಯನ್ನು
ಹುಟ್ಟಿಸಿದಂತೆ
ಕಾಣಿಸುತ್ತಿದೆ.

ಟಿಕೆಟ್
ಸಿಗದೆ
ಅಸಮಾಧಾನಗೊಂಡ
ಸಂಸದರು
ಹಾಗೂ
ಶಾಸಕರ
ಮನವೊಲಿಸುವುದೇ
ಕಾಗೇರಿಗೆ
ದೊಡ್ಡ
ಸವಾಲಾಗಿದೆ.
ಕಾಗೇರಿಗೆ
ಬೆಂಬಲ
ನೀಡಿ
ಪ್ರಚಾರಕ್ಕೆ
ಇಳಿಯದೇ
ಇದ್ದರೆ
ಮತಗಳು
ಕೈಮೀರಿ
ಹೋಗುವ
ಭೀತಿ
ಕೂಡ
ಎದುರಾಗಿದೆ.
ಹೀಗಾಗಿ
ಉತ್ತರ
ಕನ್ನಡದಲ್ಲಿ
ಬಿಜೆಪಿ
ವಲಯದಲ್ಲಿ
ಎಲ್ಲವೂ
ಸರಿಯಿಲ್ಲ
ಎನ್ನುವುದು
ಸ್ಪಷ್ಟವಾಗಿದೆ.
ಒಂದು
ವೇಳೆ
ಅಸಮಾಧಾನಿತರು
ಕಾಗೇರಿಗೆ
ಬೆಂಬಲ
ನೀಡದೇ
ಇದ್ದರೆ
ಇದರ
ಲಾಭವನ್ನು
ಕಾಂಗ್ರೆಸ್
ಪಡೆಯುವ
ಸಾಧ್ಯತೆ
ಇದೆ.

ಕಾಂಗ್ರೆಸ್‌ನ
ಡಾ.
ಅಂಜಲಿ
ಲಿಂಬಾಳ್ಕರ್‌
ಹಾಗೂ
ಕಾಗೇರಿ
ನಡುವೆ
ನೇರ
ಸ್ಪರ್ಧೆ
ನಡೆಯಲಿದೆ.
ಚುನಾವಣೆಯ
ಕಾವು
ಹೆಚ್ಚುತ್ತಿದ್ದಂತೆಯೇ,
ಕ್ಷೇತ್ರದ
ವ್ಯಾಪ್ತಿಯ
ಉತ್ತರ
ಕನ್ನಡ
ಜಿಲ್ಲೆಯ
12
ತಾಲೂಕುಗಳು
ಹಾಗೂ
ಬೆಳಗಾವಿ
ಜಿಲ್ಲೆಯ
ಎರಡು
ತಾಲೂಕುಗಳ
ಮತದಾರರನ್ನು
ಗಮನ
ಸೆಳೆದು
ಅಭ್ಯರ್ಥಿಗಳು
ಗೆಲ್ಲಬೇಕಾಗಿದೆ.

Lok Sabha Election 2024: 28 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದ ಬಿಜೆಪಿ - ಜೆಡಿಎಸ್‌; ಇಲ್ಲಿದೆ ಸಂಪೂರ್ಣ ಪಟ್ಟಿ!Lok
Sabha
Election
2024:
28
ಕ್ಷೇತ್ರಗಳಿಗೆ
ಅಭ್ಯರ್ಥಿಗಳನ್ನು
ಘೋಷಿಸಿದ
ಬಿಜೆಪಿ

ಜೆಡಿಎಸ್‌;
ಇಲ್ಲಿದೆ
ಸಂಪೂರ್ಣ
ಪಟ್ಟಿ!

ವಿಶ್ವೇಶ್ವರ
ಹೆಗಡೆ
ಮತ್ತು
ಅಂಜಲಿ
ನಿಂಬಾಳ್ಕರ
ಇಬ್ಬರೂ
ಈಗ
ಲೋಕಸಭೆ
ಪ್ರವೇಶಿಸುವುದಕ್ಕೆ
ತಮ್ಮ
ಪಕ್ಷಗಳ
ಹುರಿಯಾಳು
ಆಗಿದ್ದಾರೆ.
ವಿಧಾನಸಭಾ
ಕ್ಷೇತ್ರದ
ವ್ಯಾಪ್ತಿಯನ್ನು
ಮೀರಿ
ಬಹಳಷ್ಟು
ವಿಸ್ತಾರವಾದ
ಲೋಕಸಭಾ
ಕ್ಷೇತ್ರದ
ವ್ಯಾಪ್ತಿಯ
ಮತದಾರರ
ಮನ್ನಣೆಗಳಿಸಲು
ಇದೀಗ
ಪ್ರಯತ್ನ
ಪ್ರಾರಂಭಿಸಬೇಕಿದೆ.

ಕಾಗೇರಿ
ಅವರಿಗೆ
ಟಿಕೆಟ್
ನೀಡಿದ
ಹಿನ್ನೆಲೆಯಲ್ಲಿ
ಅನಂತ್
ಕುಮಾರ
ಹೆಗಡೆ
ಸಕ್ರಿಯವಾಗಿ
ಪ್ರಚಾರ
ಕಾರ್ಯದಲ್ಲಿ
ತೊಡಗುತ್ತಾರೆಯೋ
ಇಲ್ಲವೋ?
ಅಥವಾ
ಅವರ
ನಡೆ
ಏನು
ಎಂಬ
ಬಗ್ಗೆ
ಹಲವಾರು
ಗೊಂದಲದ
ಹೇಳಿಕೆಗಳು
ವ್ಯಕ್ತವಾಗಿದೆ.

English summary

Vishweshwar Hegde Kageri is not getting the BJP MLA and MP’s Support in Uttara Kannada. Read more in kannada.

Story first published: Thursday, March 28, 2024, 16:49 [IST]