Home LATEST NEWS kannada ಇತ್ತೀಚಿನ ಸುದ್ದಿ Heavy Rain Alert: ಇನ್ನೆರಡು ದಿನ ಭಾರಿ ಮಳೆ

Heavy Rain Alert: ಇನ್ನೆರಡು ದಿನ ಭಾರಿ ಮಳೆ

1
0

Source :- ONE INDIA NEWS

Karnataka

oi-Naveen Kumar N

|

Published: Tuesday, May 7, 2024, 12:34 [IST]

Google Oneindia Kannada News

ನೈಋತ್ಯ
ಮುಂಗಾರು
ಕರ್ನಾಟಕದ
ಹಲವು
ಜಿಲ್ಲೆಗಳನ್ನು
ತಂಪಾಗಿಸಿದೆ.
ಸೋಮವಾರ
ದಕ್ಷಿಣ
ಒಳನಾಡಿನ
ಹಲವು
ಜಿಲ್ಲೆಗಳಲ್ಲಿ
ಭಾರಿ
ಮಳೆಯಾಗಿದ್ದು,
ತಾಪಮಾನದಲ್ಲಿ
ಗಮನಾರ್ಹ
ಇಳಿಕೆಯಾಗಿದೆ.
ಇನ್ನೂ
ಎರಡು
ದಿನ
ಹಲವು
ಜಿಲ್ಲೆಗಳಲ್ಲಿ
ಭಾರಿ
ಮಳೆಯಾಗಲಿದೆ
ಎಂದು
ಹವಾಮಾನ
ಇಲಾಖೆ
ಮುನ್ಸೂಚನೆ
ನೀಡಿದೆ.

ಸೋಮವಾರ
ಬೆಂಗಳೂರು,
ಕೋಲಾರ,
ಮಂಡ್ಯ,
ಮೈಸೂರು,
ತುಮಕೂರು,
ಚಾಮರಾಜನಗರ
ಸೇರಿದಂತೆ
ಹಲವು
ಜಿಲ್ಲೆಗಳಲ್ಲಿ
ವ್ಯಾಪಕ
ಮಳೆಯಾಗಿದೆ.
ಮುಂದಿನ
ಎರಡು
ದಿನ
ದಕ್ಷಿಣ
ಒಳನಾಡಿನ
ಜಿಲ್ಲೆಗಳಲ್ಲಿ
ಗುಡುಗು
ಮಿಂಚು
ಸಹಿತ
ಭಾರಿ
ಮಳೆಯ
ಮುನ್ಸೂಚನೆ
ಸಿಕ್ಕಿದೆ.

Heavy Rain Alert for Karnataka Districts on May 7th and 8th

ಯಾವ
ಜಿಲ್ಲೆಗಳಲ್ಲಿ
ಮಳೆ?

ಬೆಂಗಳೂರು,
ಕೋಲಾರ,
ಚಿಕ್ಕಬಳ್ಳಾಪುರ,
ತುಮಕೂರು,
ರಾಮನಗರ,
ಮಂಡ್ಯ,
ಮೈಸೂರು
ಮತ್ತು
ಚಾಮರಾಜನಗರ
ಜಿಲ್ಲೆಗಳಲ್ಲಿ
ಸಾಕಷ್ಟು
ವ್ಯಾಪಕವಾದ
ಗುಡುಗು
ಸಹಿತ
ಭಾರೀ
ಮಳೆಯಾಗುವ
ಸಾಧ್ಯತೆಯಿದೆ.
ಕೊಡಗು,
ಹಾಸನ,
ದಕ್ಷಿಣ
ಕನ್ನಡ
ಘಟ್ಟ
ಪ್ರದೇಶ
ಮತ್ತು
ಚಿಕ್ಕಮಗಳೂರು
ಜಿಲ್ಲೆಗಳಲ್ಲಿ
ಚದುರಿದಂತೆ
ಮಳೆಯಾಗಲಿದೆ
ಎಂದು
ಹವಾಮಾನ
ಇಲಾಖೆ
ಹೇಳಿದೆ.

ಸೋಮವಾರ
ಸುರಿದ
ಮಳೆ
ವಿವರ

ಚಾಮರಾಜನಗರ
ಜಿಲ್ಲೆಯಲ್ಲಿ
115.5
ಮಿ.ಮೀ
ಮಳೆಯಾಗಿದ್ದು
ಹೆಚ್ಚು
ಮಳೆಯಾದ
ಜಿಲ್ಲೆ
ಎನಿಸಿಕೊಂಡಿದೆ.
ಮೈಸೂರು
108.5
ಮಿ.ಮೀ,
ಕೋಲಾರ
94
ಮಿ.ಮೀ,
ಬೆಂಗಳೂರು
ನಗರ
69
ಮಿ.ಮೀ,
ಬೆಂಗಳೂರು
ಗ್ರಾಮಾಂತರ
43
ಮಿ.ಮೀ,
ಮಂಡ್ಯ
55.5
ಮಿ.ಮೀ,
ರಾಮನಗರ
35
ಮಿ.ಮೀ,
ತುಮಕೂರು
37.5
ಮಿ.ಮೀ,
ಹಾಸನ
33.5
ಮಿ.ಮೀ,
ಕೊಡಗು
25.5
ಮಿ.ಮೀ,
ಚಿಕ್ಕಬಳ್ಳಾಪುರ
19
ಮಿ.ಮೀ,
ಚಿಕ್ಕಮಗಳೂರು
17.5
ಮಿ.ಮೀ
ಮಳೆಯಾಗಿದೆ
ಎಂದು
ಹವಾಮಾನ
ಇಲಾಖೆ
ಅಂಕಿಅಂಶಗಳು
ಹೇಳಿವೆ.

ತುಮಕೂರು
ಜಿಲ್ಲೆಯ
ಮಧುಗಿರಿ
ತಾಲೂಕಿನಲ್ಲಿ
ಸೋಮವಾರ
ಉತ್ತಮ
ಮಳೆಯಾಗಿದ್ದು,
ಇಂದು
ಕೂಡ
ಜಿಲ್ಲೆಯ
ಹಲವು
ಕಡೆಗಳಲ್ಲಿ
ಭಾರಿ
ಮಳೆಯಾಗುವ
ಮುನ್ಸೂಚನೆ
ಇದೆ.

English summary

IMD Predicts heavy rain in Many districts of karnataka on May 7th and 8th. Including Bengaluru, mysuru, kolar, tumkur and many district will expect rain with thunderstorm.

Story first published: Tuesday, May 7, 2024, 12:34 [IST]