Home LATEST NEWS kannada ಇತ್ತೀಚಿನ ಸುದ್ದಿ Breaking: ಇಂದೂ ಸಿಗಲಿಲ್ಲ ಅರವಿಂದ್ ಕೇಜ್ರಿವಾಲ್‌ಗೆ ಮಧ್ಯಂತರ ಜಾಮೀನು

Breaking: ಇಂದೂ ಸಿಗಲಿಲ್ಲ ಅರವಿಂದ್ ಕೇಜ್ರಿವಾಲ್‌ಗೆ ಮಧ್ಯಂತರ ಜಾಮೀನು

1
0

Source :- ONE INDIA NEWS

India

oi-Mamatha M

|

Published: Tuesday, May 7, 2024, 15:20 [IST]

Google Oneindia Kannada News

ನವದೆಹಲಿ,
ಮೇ.
07
:
ಇದೀಗ
ರದ್ದುಗೊಂಡಿರುವ
ದೆಹಲಿ
ಅಬಕಾರಿ
ನೀತಿಗೆ
ಸಂಬಂಧಿಸಿದ
ಅಕ್ರಮ
ಹಣ
ವರ್ಗಾವಣೆ
ಪ್ರಕರಣದಲ್ಲಿ
ದೆಹಲಿ
ನ್ಯಾಯಾಲಯವು
ಮಂಗಳವಾರ
ಮುಖ್ಯಮಂತ್ರಿ
ಅರವಿಂದ್
ಕೇಜ್ರಿವಾಲ್
ಅವರ
ನ್ಯಾಯಾಂಗ
ಬಂಧನವನ್ನು
ಮೇ
20
ರವರೆಗೆ
ವಿಸ್ತರಿಸಿದೆ.


ಹಿಂದೆ
ನೀಡಲಾಗಿದ್ದ
ಕಸ್ಟಡಿ
ಅವಧಿ
ಮುಕ್ತಾಯವಾದ
ಹಿನ್ನೆಲೆಯಲ್ಲಿ
ಅರವಿಂದ್
ಕೇಜ್ರಿವಾಲ್
ಅವರನ್ನು
ವಿಡಿಯೋ
ಕಾನ್ಫರೆನ್ಸ್
ಮೂಲಕ
ನ್ಯಾಯಾಲಯಕ್ಕೆ
ಹಾಜರುಪಡಿಸಲಾಗಿತ್ತು.
ಸಿಬಿಐ
ಮತ್ತು
ಇಡಿ
ವಿಶೇಷ
ನ್ಯಾಯಾಧೀಶ
ಕಾವೇರಿ
ಬವೇಜಾ
ಸಹ
ಆರೋಪಿ
ಚನ್‌ಪ್ರೀತ್
ಸಿಂಗ್
ಅವರ
ನ್ಯಾಯಾಂಗ
ಬಂಧನವನ್ನು
ಮೇ
20
ರವರೆಗೆ
ವಿಸ್ತರಿಸಿದ್ದಾರೆ.

No interim bail for Arvind Kejriwal Delhi court extends judicial custody till May 20

ಇನ್ನು,
ಲೋಕಸಭೆ
ಚುನಾವಣೆ
2024

ಮಧ್ಯೆ
ದೆಹಲಿ
ಮುಖ್ಯಮಂತ್ರಿ
ಅರವಿಂದ್
ಕೇಜ್ರಿವಾಲ್
ಅವರ
ಜಾಮೀನು
ಅರ್ಜಿಯನ್ನು
ಸುಪ್ರೀಂ
ಕೋರ್ಟ್
ಇಂದು
(ಮೇ
7)
ವಿಚಾರಣೆ
ನಡೆಸುತ್ತಿದೆ.
ಕಳೆದ
ವಾರ,
ಎಎಪಿ
ಮುಖ್ಯಸ್ಥರಿಗೆ
ಮಧ್ಯಂತರ
ಜಾಮೀನನ್ನು
ಪರಿಗಣಿಸಲು
ಮುಕ್ತವಾಗಿದೆ
ಎಂದು
ನ್ಯಾಯಾಲಯವು
ಅಭಿಪ್ರಾಯ
ವ್ಯಕ್ತಪಡಿಸಿದೆ.

Rahul Gandhi: ರಾಹುಲ್ ಗಾಂಧಿ ಯಾವಾಗಲೂ ವೈಟ್ ಟೀ ಶರ್ಟ್ ಧರಿಸೋದು ಯಾಕೆ?Rahul
Gandhi:
ರಾಹುಲ್
ಗಾಂಧಿ
ಯಾವಾಗಲೂ
ವೈಟ್
ಟೀ
ಶರ್ಟ್
ಧರಿಸೋದು
ಯಾಕೆ?

ವಿಚಾರಣೆಗೆ
ಸಿದ್ಧವಾಗುವಂತೆ
ಜಾರಿ
ನಿರ್ದೇಶನಾಲಯವನ್ನು
(ಇಡಿ)
ಒತ್ತಾಯಿಸಿದ
ಸುಪ್ರೀಂ
ಕೋರ್ಟ್,
“ನಾವು
ಜಾಮೀನು
ನೀಡಬಹುದು
ಅಥವಾ
ನೀಡದೇ
ಇರಬಹುದು”
ಎಂದಿದೆ.
ನ್ಯಾಯಮೂರ್ತಿಗಳಾದ
ಸಂಜೀವ್
ಖನ್ನಾ
ಮತ್ತು
ದೀಪಂಕರ್
ದತ್ತಾ
ಅವರ
ದ್ವಿಸದಸ್ಯ
ಪೀಠವು
ಕೇಜ್ರಿವಾಲ್‌ಗೆ
ಮಧ್ಯಂತರ
ಜಾಮೀನಿನ
ಪ್ರಶ್ನೆಯನ್ನು
ಪರಿಗಣಿಸಬಹುದು
ಎಂದು
ತಿಳಿಸಿದೆ.

No interim bail for Arvind Kejriwal Delhi court extends judicial custody till May 20

ಸುಪ್ರೀಂ
ಕೋರ್ಟ್‌ನಲ್ಲಿ
ಜಾರಿ
ನಿರ್ದೇಶನಾಲಯದ
ಇಡಿ
ಪರ
ವಾದ
ಮಂಡಿಸಿದ
ಸಾಲಿಸಿಟರ್
ಜನರಲ್
ತುಷಾರ್
ಮೆಹ್ತಾ
ಅವರು,
ಮಧ್ಯಂತರ
ಜಾಮೀನು
ಕುರಿತು
ಸುಪ್ರೀಂ
ಕೋರ್ಟ್
ವಾದ
ಆಲಿಸಿದ್ದಕ್ಕೆ
ಆಕ್ಷೇಪ
ವ್ಯಕ್ತಪಡಿಸಿದ್ದಾರೆ.
ನಾವು
ಯಾವ
ಉದಾಹರಣೆ
ನೀಡುತ್ತಿದ್ದೇವೆ?
ಮುಖ್ಯಮಂತ್ರಿಗಿಂತ
ಇತರ
ವ್ಯಕ್ತಿಗಳು
ಕಡಿಮೆಯೇ?,
ಮುಖ್ಯಮಂತ್ರಿಯನ್ನು
‘ಆಮ್
ಆದ್ಮಿ’ಗಿಂತ
ಭಿನ್ನವಾಗಿ
ಹೇಗೆ
ನಡೆಸಿಕೊಳ್ಳಬಹುದು.
ಅವರು
ಮುಖ್ಯಮಂತ್ರಿ
ಎಂಬ
ಕಾರಣಕ್ಕೆ
ಯಾವುದೇ
ಪ್ರಮುಖ್ಯತೆ
ನೀಡಬಾರದು
ಎಂದು
ವಾದಿಸಿದ್ದಾರೆ.

ವಿಚಾರಣೆಯ
ಸಂದರ್ಭದಲ್ಲಿ,
ಮುಖ್ಯಮಂತ್ರಿ
ಅರವಿಂದ್
ಕೇಜ್ರಿವಾಲ್
ಅವರಿಗೆ
ಮಧ್ಯಂತರ
ಜಾಮೀನು
ನೀಡಿದರೇ
ಅವರು
ಅಧಿಕೃತ
ಕರ್ತವ್ಯಗಳನ್ನು
ನಿರ್ವಹಿಸುವುದರಿಂದ
ದೂರವಿರಬೇಕು
ಎಂಬ
ಷರತ್ತು
ಬರುತ್ತದೆ
ಎಂದು
ಕೇಜ್ರಿವಾಲ್
ಅವರ
ವಕೀಲರಿಗೆ
ಸುಪ್ರೀಂ
ಕೋರ್ಟ್
ಹೇಳಿದೆ.

English summary

Arvind Kejriwal: No interim bail for Delhi Chief Minister Arvind Kejriwal, delhi court on Tuesday extended the judicial custody till May 20 in excise policy case. Know more.

Story first published: Tuesday, May 7, 2024, 15:20 [IST]