Home LATEST NEWS kannada ಇತ್ತೀಚಿನ ಸುದ್ದಿ ಬಿಡಿಎ ಕಾಂಪ್ಲೆಕ್ಸ್‍ಗಳ ಲೀಸ್ ವಿರುದ್ಧ ತೀವ್ರ ಹೋರಾಟ; ಇದೇನೂ ಕಾಂಗ್ರೆಸ್ಸಿಗರ ಅಪ್ಪನ ಆಸ್ತಿ ಅಲ್ಲ: ಆರ್.ಅಶೋಕ್

ಬಿಡಿಎ ಕಾಂಪ್ಲೆಕ್ಸ್‍ಗಳ ಲೀಸ್ ವಿರುದ್ಧ ತೀವ್ರ ಹೋರಾಟ; ಇದೇನೂ ಕಾಂಗ್ರೆಸ್ಸಿಗರ ಅಪ್ಪನ ಆಸ್ತಿ ಅಲ್ಲ: ಆರ್.ಅಶೋಕ್

1
0

Source :- ONE INDIA NEWS

Karnataka

oi-Reshma P

|

Updated: Tuesday, May 7, 2024, 15:26 [IST]

Google Oneindia Kannada News

ಬೆಂಗಳೂರು,
ಮೇ
07:
ಬಿಡಿಎ
ಕಾಂಪ್ಲೆಕ್ಸ್‍ಗಳನ್ನು
ಲೀಸ್‍ಗೆ
ಕೊಡುವ
ಮೂಲಕ
ಪರೋಕ್ಷ
ಮಾರಾಟಕ್ಕೆ
ದಿವಾಳಿಯತ್ತ
ಮುನ್ನಡೆಯುತ್ತಿರುವ
ರಾಜ್ಯದ
ಕಾಂಗ್ರೆಸ್
ಸರಕಾರ
ಮುಂದಾಗಿದೆ.
ಇದರ
ವಿರುದ್ಧ
ಬಿಜೆಪಿಯು
ಜನರ
ಜೊತೆಗೂಡಿ
ಹೋರಾಟವನ್ನು
ಹಮ್ಮಿಕೊಳ್ಳಲಿದೆ
ಎಂದು
ವಿರೋಧ
ಪಕ್ಷದ
ನಾಯಕ
ಆರ್.
ಅಶೋಕ್
ಅವರು
ಎಚ್ಚರಿಸಿದರು.


ಕುರಿತು
ಬಿಜೆಪಿ
ಕಚೇರಿಯಲ್ಲಿ
ಮಾಧ್ಯಮಗಳ
ಜೊತೆಗೆ
ಮಾತನಾಡಿದ
ಅವರು,
ಎಚ್‍ಎಸ್‍ಆರ್
ಲೇ
ಔಟ್,
ಆಸ್ಟಿನ್
ಟೌನ್,
ಕೋರಮಂಗಲ,
ವಿಜಯನಗರ,
ಆರ್.ಟಿ.ನಗರ,
ಸದಾಶಿವನಗರದ
ಬಿಡಿಎ
ಸ್ವತ್ತುಗಳನ್ನು
ನುಂಗಣ್ಣಗಳು
ನುಂಗಲು
ಹೊರಟಿದ್ದಾರೆ.
2013-18ರಲ್ಲಿ
ಇದೇ
ಮಾದರಿಯ
ಯೋಜನೆ
ಜಾರಿಗೊಳಿಸಲು
ಕಾಂಗ್ರೆಸ್
ಸರಕಾರ
ಮುಂದಾಗಿತ್ತು.
ಇದರ
ವಿರುದ್ಧ
ಬೆಂಗಳೂರಿನ
ಜನರು
ಪ್ರತಿಭಟನೆ
ಮಾಡಿದ್ದರು
ಎಂದು
ನೆನಪಿಸಿದರು.

Opposition leader R Ashok lashed out at the Congress government

ಆಗ
ಅದು
ನಿಂತು
ಹೋಗಿತ್ತು.
ಮಡಿವಾಳದ
ಆಸ್ತಿ
ಕಾಂಗ್ರೆಸ್
ನಾಯಕರ
ಪಾಲಾದಂತೆ
ಇದು
ಕೂಡ
ಆಗಬಾರದೆಂದು
ಜನರು
ಹೋರಾಟ
ಆರಂಭಿಸಿದ್ದಾರೆ.
3
ಸಾವಿರ
ಕೋಟಿ
ಬೆಲೆಬಾಳುವ
ಆಸ್ತಿ
ಇದು.
ಇದರ
ಹಿಂದೆ
200
ಕೋಟಿಗೂ
ಮೇಲ್ಪಟ್ಟು
ಕಿಕ್
ಬ್ಯಾಕ್
ಇದೆ.
ಇದೇನೂ
ಕಾಂಗ್ರೆಸ್ಸಿಗರ
ಅಪ್ಪನ
ಆಸ್ತಿ
ಅಲ್ಲ.
ಬಿಡಿಎ
ಹಿಂದಿನ
ಅಧ್ಯಕ್ಷರು
ಆಸ್ತಿಗಳನ್ನು
ಉಳಿಸಿ
ಬೆಳೆಸಿದ್ದಾರೆ.
‘ದಿನವೂ
ಕೋಳಿ
ಮೊಟ್ಟೆ
ತಿನ್ನೋದ್ಯಾಕೆ?
ಕೋಳಿಯನ್ನೇ
ತಿಂದರೆ
ಹೇಗೆ’
ಎಂದು
ಇವರು
ಹೊರಟಿದ್ದಾರೆ
ಎಂದು
ಆಕ್ಷೇಪ
ವ್ಯಕ್ತಪಡಿಸಿದರು.
ಇದನ್ನು
ಕಾಂಗ್ರೆಸ್
ನುಂಗಣ್ಣಗಳ
ಪಾಲಾಗಲು
ಯಾವುದೇ
ಕಾರಣಕ್ಕೂ
ಬಿಡುವುದಿಲ್ಲ
ಎಂದು
ಎಚ್ಚರಿಕೆ
ನೀಡಿದರು.

ಎಚ್‍ಎಸ್‍ಆರ್‍ನಲ್ಲಿ
ಸತೀಶ್
ರೆಡ್ಡಿಯವರ
ನೇತೃತ್ವದಲ್ಲಿ
ಪ್ರತಿಭಟನೆಗೆ
ಜನರು
ಮುಂದಾಗಿದ್ದಾರೆ.
ಸರಕಾರವು
ಪಾಪರ್
ಆಗಿದ್ದರೆ
ಬೇರೆ
ಆದಾಯ
ಮೂಲಗಳನ್ನು
ಹುಡುಕಬೇಕು.
ಸರಕಾರಿ
ಆಸ್ತಿ
ನುಂಗಿ
ನೀರು
ಕುಡಿಯಲು
ಯಾವುದೇ
ಕಾರಣಕ್ಕೂ
ಅವಕಾಶ
ಕೊಡುವುದಿಲ್ಲ
ಎಂದು
ತಿಳಿಸಿದರು.
ಟೆಂಡರ್
ಪ್ರಸ್ತಾಪವವನ್ನು
ರದ್ದು
ಮಾಡಬೇಕು.
ಇಲ್ಲವಾದರೆ
ವಿಧಾನಸಭೆ
ಒಳಗೆ
ಮತ್ತು
ಹೊರಗಡೆ
ಹೋರಾಟ
ನಡೆಸುತ್ತೇವೆ
ಎಂದು
ಆರ್.
ಅಶೋಕ್
ಅವರು
ತಿಳಿಸಿದರು.

ಹಿಂದೆ
ಯಡಿಯೂರಪ್ಪ
ಅವರು
ಮುಖ್ಯಮಂತ್ರಿ
ಇದ್ದಾಗ

ಕಡತ
ಬಂದಿತ್ತು.
ನಾನು
ಸಚಿವನಾಗಿದ್ದೆ.
ಇದು
ಲೂಟಿ
ಹೊಡೆಯುವ
ಸ್ಕೀಂ
ಎಂದು
ತಿಳಿಸಿ
ರದ್ದು
ಮಾಡಿಸಿದ್ದೆ.
ಮತ್ತೆ

ಮಾಫಿಯಾವು
ಬಸವರಾಜ
ಬೊಮ್ಮಾಯಿಯವರ
ಮುಂದೆ

ಕಡತವನ್ನು
ತಂದಿತ್ತು.
ಆದರೆ,
ಬೊಮ್ಮಾಯಿಯವರು
ಲೀಸ್‍ಗೆ
ಅವಕಾಶ
ಕೊಡಲಿಲ್ಲ.
ಈಗ
ಮತ್ತೆ
ಬಿಡಿಎ
ಕಾಂಗ್ರೆಸ್
ಅಧಿಕಾರದಲ್ಲಿ
ಹರಾಜಿಗೆ
ಬರುತ್ತಿದೆ
ಎಂದು
ಅವರು
ತಿಳಿಸಿದರು.

ಕೇಂದ್ರದಲ್ಲಿರುವ
ರಾಹುಲ್
ಗಾಂಧಿ,
ಸೋನಿಯಾ
ಗಾಂಧಿಯವರಿಗೆ
ಕಪ್ಪ
ಕೊಡಲು

ಹಣವನ್ನು
ಲೂಟಿ
ಮಾಡಲು
ಹೊರಟಿದ್ದಾರೆ
ಎಂದು
ಅವರು
ಆರೋಪಿಸಿದರು.
ಸರಕಾರಿ
ಆಸ್ತಿ
ಉಳಿಸಿಕೊಳ್ಳಲು
ಬೆಂಗಳೂರಿನ
ಜನರು
ಬೆಂಬಲವಾಗಿ
ನಿಲ್ಲಬೇಕಿದೆ
ಎಂದು
ತಿಳಿಸಿದರು.

ಕೇಂದ್ರ
ಸರಕಾರ
ಬಿಡುಗಡೆ
ಮಾಡಿದ
ಬರ
ಪರಿಹಾರ
ಮೊತ್ತಕ್ಕೆ
ಮ್ಯಾಚಿಂಗ್
ಗ್ರಾಂಟ್
ಸೇರಿಸಿ
ರೈತರಿಗೆ
ನೀಡಬೇಕು.
ಇದನ್ನು
ಯಾವುದೇ
ಕಾರಣಕ್ಕೂ
ಗ್ಯಾರಂಟಿ
ಸ್ಕೀಂಗಳಿಗೆ
ಬಳಸಬಾರದು
ಎಂದು
ಅವರು
ಆಗ್ರಹಿಸಿದರು.
ಜನರು
ಇಂದು
ನಡೆಯುವ
ರಾಜ್ಯದ
ಎರಡನೇ
ಹಂತದ
ಮತದಾನದಲ್ಲಿ
ಗರಿಷ್ಠ
ಪ್ರಮಾಣದಲ್ಲಿ
ಮತದಾನ
ಮಾಡಬೇಕು.

ಮೂಲಕ
ಸುಭದ್ರ
ಸರಕಾರ
ರಚನೆಗೆ
ಅವಕಾಶ
ಮಾಡಿಕೊಡಬೇಕು
ಎಂದು
ಅವರು
ವಿನಂತಿಸಿದರು.

English summary

R Ashok Said That A strong fight will be made against the lease of BDA complexes.