Home LATEST NEWS kannada ಇತ್ತೀಚಿನ ಸುದ್ದಿ ಡಿಕೆಶಿ ಇತಿಹಾಸ ಎಲ್ಲರಿಗೂ ಗೊತ್ತು: ಸಿದ್ದರಾಮಯ್ಯನವರೇ ಮೊದಲು ಕ್ಯಾಬಿನೆಟ್‌ ನಿಂದ ಕಿತ್ತಾಕಿ: ಕುಮಾರಸ್ವಾಮಿ

ಡಿಕೆಶಿ ಇತಿಹಾಸ ಎಲ್ಲರಿಗೂ ಗೊತ್ತು: ಸಿದ್ದರಾಮಯ್ಯನವರೇ ಮೊದಲು ಕ್ಯಾಬಿನೆಟ್‌ ನಿಂದ ಕಿತ್ತಾಕಿ: ಕುಮಾರಸ್ವಾಮಿ

1
0

Source :- ONE INDIA NEWS

Karnataka

oi-Reshma P

|

Published: Tuesday, May 7, 2024, 15:26 [IST]

Google Oneindia Kannada News

ಬೆಂಗಳೂರು,
ಮೇ
07:
ಪ್ರಜ್ವಲ್‌
ರೇವಣ್ಣ
ಅವರ
ಪ್ರಕರಣಲ್ಲಿ
ಡಿಸಿಎಂ
ಡಿಕೆ
ಶಿವಕುಮಾರ್
ಹಸ್ತಕ್ಷೇಪದಲ್ಲಿ
ನಡೆಯುವ
ತನಿಖೆಯಿಂದ
ವಾಸ್ತವ
ಹೊರಬರುವುದಿಲ್ಲ.
ಅಂಥ
ವ್ಯಕ್ತಿಯನ್ನು
ಸಂಪುಟದಲ್ಲಿ
ಇಟ್ಟುಕೊಂಡು
ತನಿಖೆ
ಮಾಡಿದರೆ
ಸೂಕ್ತ
ರೀತಿಯಲ್ಲಿ
ತನಿಖೆ
ಸಾಗದು.
ಹೀಗಾಗಿ
ಅವರನ್ನು
ಸಂಪುಟದಿಂದ
ವಜಾಗೊಳಿಸಿ
ತನಿಖೆ
ಮುಂದುವರಿಸಲಿ
ಎಂದು
ಮಾಜಿ
ಸಿಎಂ
ಹೆಚ್‌
ಡಿ
ಕುಮಾರಸ್ವಾಮಿ
ಆಗ್ರಹಿಸಿದ್ದಾರೆ.


ಕುರಿತು
ಮಾಧ್ಯಮಗಳ
ಜೊತೆ
ಮಾಜಿ
ಸಿಎಂ
ಹೆಚ್‌
ಡಿ
ಕುಮಾರಸ್ವಾಮಿ
ಅವರು
ಮಾತನಾಡಿ,
ಡಿ
ಕೆ
ಶಿವಕುಮಾರ್‌
ಅವರ
ಇತಿಹಾಸ
ಎಲ್ಲರಿಗೂ
ಗೊತ್ತು.
ಮೊದಲು

ಒಳಸಂಚು
ಮಾಡಿದ್ದರಿಂದ
ಕಿತ್ತು
ಬೀಸಾಕಿ
ರೇವಣ್ಣ
ಅವರನ್ನ
ವಶಕ್ಕೆ
ಪಡೆದ್ರಲ್ಲ
ಸಿಎಂ
ಅವರೇ.
ಮೊದಲ
ಕ್ಯಾಬಿನೆಟ್‌
ನಿಂದ
ಡಿ
ಕೆ
ಶಿವಕುಮಾರ್‌
ಅವರನ್ನ
ಕಿತ್ತಾಕಿ
ಎಂದು
ಕುಮಾರಸ್ವಾಮಿ
ವಾಗ್ದಾಳಿ
ನಡೆಸಿದರು.

Prajwal Revanna Case HD Kumaraswamy Demands Dismissal Of DK Shivakumar From Cabinet

ನಮ್ಮ
ಹೆಸರನ್ನ
ಪದೇ
ಪದೇ
ಬಳಸಿಕೊಳ್ಳುತ್ತಿದ್ದ
ಹಿನ್ನೆಲೆ
ತಡೆಯಾಜ್ಞೆ
ತಂದಿದ್ದೇನೆ.
ನಾನು
ಇಲ್ಲಿ
ಇವತ್ತು
ಜನಪ್ರತಿನಿಧಿಯಾಗಿ,
ಶಾಸಕಾಂಗ
ಪಕ್ಷದ
ನಾಯಕನಾಗಿ
ರಾಜ್ಯದಲ್ಲಿ
ದಾರಿ
ತಪ್ತಿದೆ,

ಜವಬ್ದಾರಿಯಿಂದ
ಕೂತಿದ್ದೇನೆ.
ನನ್ನ
ವೈಯಕ್ತಿಕ
ಅಲ್ಲ
ಇದು,
ರಾಜ್ಯದ
ಬೆಳವಣಿಗೆಯ
ಹಿನ್ನೆಲೆಯಲ್ಲಿ
ಜನತೆ
ಮುಂದೆ
ತರಲು
ಇಲ್ಲಿ
ಬಂದು
ಮಾತನಾಡಿದ್ದೇನೆ
ಎಂದು
ಹೇಳಿದರು.

ಪ್ರಜ್ವಲ್
ಪ್ರಕರಣದಲ್ಲಿ
16
ವರ್ಷ
ವಯಸ್ಸಿನ
ಬಾಲಕಿಯೂ
ಸಂತ್ರಸ್ತೆ
ಎಂದು
ಕಾಂಗ್ರೆಸ್
ನಾಯಕ
ರಾಹುಲ್
ಗಾಂಧಿ
ಬಹಿರಂಗವಾಗಿ
ಹೇಳಿದ್ದಾರೆ.
ಯಾವ
ಆಧಾರದ
ಮೇಲೆ
ಕಾಂಗ್ರೆಸ್‌
ನಾಯಕರಾದ
ರಾಹುಲ್​
ಗಾಂಧಿ

ಹೇಳಿಕೆ
ನೀಡಿದರು?

ಬಗ್ಗೆ
ಇದುವರೆಗೂ
ಯಾಕೆ
ಎಸ್ಐಟಿ
ತನಿಖೆ
ಮಾಡಿಲ್ಲ?
400
ಮಹಿಳೆಯರನ್ನು
ಅತ್ಯಾಚಾರ
ಮಾಡಲಾಗಿದೆ
ಎನ್ನುತ್ತಾರೆ.
ಹಾಗಾದರೆ
ಯಾಕೆ
ರಾಹುಲ್​
ಗಾಂಧಿಯವರನ್ನು
ಇನ್ನು
ಬಿಟ್ಟಿದ್ದಾರೆ
ಎಂದು
ಪ್ರಶ್ನಿಸಿದರು.

ಇನ್ನೂ
ನಾನು
ಪ್ರಜ್ವಲ್​
ರೇವಣ್ಣರನ್ನ
ವಹಿಸಿಕೊಂಡು
ಮಾತನಾಡುತ್ತಿಲ್ಲ.
ಒಂದು
ತನಿಖೆ
ಪ್ರಾರಂಭ
ಮಾಡಿದಾಗ
ಮಾಹಿತಿ
ಸೋರಿಕೆ
ಆಗಬಾರದು.
ಸರ್ಕಾರಕ್ಕೆ,
ಸಂತ್ರಸ್ತೆಯರಿಗೆ
ರಕ್ಷಣೆ
ಕೊಡುವುದು
ಬೇಕಾಗಿಲ್ಲ.

ಸರ್ಕಾರಕ್ಕೆ
ಬೇಕಾಗಿರುವುದು
ಕೇವಲ
ಪ್ರಚಾರ
ಅಷ್ಟೇ.
ಹಾಸನ
ಲೋಕಸಭಾ
ಕ್ಷೇತ್ರದ
ಮೈತ್ರಿ
ಅಭ್ಯರ್ಥಿ
ಪ್ರಜ್ವಲ್‌
ಪರ
ಏಪ್ರಿಲ್‌
22
ರಂದು
ಬೇಲೂರಿನಲ್ಲಿ
ಚುನಾವಣಾ
ಪ್ರಚಾರ
ಸಭೆ
ನಡೆಯಿತು.
ಏಪ್ರಿಲ್‌
22ರಂದು
ಪ್ರಜ್ವಲ್​
ಪಕ್ಕದಲ್ಲಿ
ಕುಳಿತ
ಹೆಣ್ಣು
ಮಗಳು
ಯಾರು?
ಅತ್ಯಾಚಾರ
ಆಗಿದ್ರೆ

ಹೆಣ್ಮಗಳು
ಯಾಕೆ
ಒಂದೇ
ವೇದಿಕೆಯಲ್ಲಿ
ಇರುತ್ತಿದ್ದರು?ಪ್ರಜ್ವಲ್​
ಪಕ್ಕ

ಹೆಣ್ಣು
ಮಗಳು
ಯಾಕೆ
ಕುಳಿತುಕೊಳ್ಳುತ್ತಿದ್ದರು
ಎಂದು
ಪ್ರಶ್ನಿಸಿದರು.

ಕಾಂಗ್ರೆಸ್‌
ಇಷ್ಟೆಲ್ಲ
ಕುತಂತ್ರ
ನಡೆಸಿರೊದು
ನಮ್ಮ
ಮೈತ್ರಿ
ಆದ
ಮೇಲೆ,
ಅವರ
ವೇಗ
ಗ್ಯಾರಂಟಿಗಳೆಲ್ಲ
ಮುಳುಗೊಯ್ತು,
25
ಗೆಲ್ತಿವಿ
ಅಂತ
ತಿಳಿದುಕೊಂಡ್ರು,
ನಮ್ಮ
ಮೈತ್ರಿಯಿಂದ
ಅವರ
ಬೆಳವಣಿಗೆಗಳು.
ಒಂದು
ಟೀಮ್
ನಾವು
ಒಕ್ಕಲಿಗ
ನಾಯಕರು,
ಒಕ್ಕಲಿಗರು
ನಮ್ಮ
ಜೇಬಿನಲ್ಲಿ
ಇಟ್ಟುಕೊಂಡಿದ್ದೇನೆ,
ನಮ್ಮ
ಜೊತೆ
ಬಂದಾಯ್ತು
ಎಂದು
ಅಂದುಕೊಂಡಿದ್ರಲ್ಲ
ಅವರಿಗೆ
ಪೆಟ್ಟಾಯ್ತು.
ಚುನಾವಣೆಯ
ಫಲಿತಾಂಶ
ಏನೆಂದು
ಗೊತ್ತಾಗಿದೆ.
ಚುನಾವಣೆಯ
ಫಲಿತಾಂಶ
ನಂತರ
ಅವರ
ಮುಂದಿನ
ಭವಿಷ್ಯ
ಏನಾಗುತ್ತೆ
ಎಂದು
ಅವರಿಗೆ
ಗೊತ್ತಾಗಿದೆ.
ಹೀಗಾಗಿ
ಅವರಿಗೆ
ತಳಮಳ
ತಂದಿದೆ
ಎಂದು
ಕುಮಾರಸ್ವಾಮಿ
ವಾಗ್ದಾಳಿ
ನಡೆಸಿದರು.

English summary

prajwal revanna sexual harassment case: HD Kumaraswamy Said That said that DK Shivakumar should resign,

Story first published: Tuesday, May 7, 2024, 15:26 [IST]