Home LATEST NEWS kannada ಇತ್ತೀಚಿನ ಸುದ್ದಿ ಲೋಕಸಭೆ ಚುನಾವಣೆ ಮತದಾನ ಮುಕ್ತಾಯ, ನೀವು ವೋಟ್ ಹಾಕಿದ್ರಾ?

ಲೋಕಸಭೆ ಚುನಾವಣೆ ಮತದಾನ ಮುಕ್ತಾಯ, ನೀವು ವೋಟ್ ಹಾಕಿದ್ರಾ?

1
0

Source :- ONE INDIA NEWS

Karnataka

oi-Malathesha M

|

Published: Tuesday, May 7, 2024, 18:49 [IST]

Google Oneindia Kannada News

2024ರ
ಲೋಕಸಭೆ
ಚುನಾವಣೆಗೆ
ಕರ್ನಾಟಕದಲ್ಲಿ
2ನೇ
ಹಂತದ
ಮತದಾನ
ಮುಕ್ತಾಯವಾಗಿದೆ.
1ನೇ
ಹಂತದಲ್ಲಿ
ದಕ್ಷಿಣ
ಕರ್ನಾಟಕದ
ಜಿಲ್ಲೆಗಳಿಗೆ
ಮತದಾನ
ನಡೆದಿತ್ತು,
ಇಂದು
ಮಧ್ಯ
&
ಉತ್ತರ
ಕರ್ನಾಟಕದ
ಲೋಕಸಭಾ
ಕ್ಷೇತ್ರಗಳಿಗೆ
ಮತದಾನ
ನಡೆದಿದೆ.
ಅದರಲ್ಲೂ
ಹುಬ್ಬಳ್ಳಿ
ಹಾಗೂ
ಕುಂದಗೋಳ
ತಾಲೂಕಿನ
ಗ್ರಾಮೀಣ
ಭಾಗದ
ಅಂಚಟಗೇರಿ,
ನೂಲ್ವಿ,
ಕುಂದಗೋಳ,
ಬೆನಕನಹಳ್ಳಿ,
ಚಿಕ್ಕನೇರ್ತಿ,
ರೊಟ್ಟಿಗವಾಡ
ಸೇರಿ
ವಿವಿಧ
ಗ್ರಾಮಗಳಲ್ಲಿ
ಶಾಂತಿಯುತ
ಮತದಾನ
ನಡೆದಿದೆ.

ಇಂದು
ಬೆಳಿಗ್ಗೆಯಿಂದಲೇ
ಮತದಾರರು
ಮತಗಟ್ಟೆಗಳಲ್ಲಿ
ಸರತಿ
ಸಾಲಿನಲ್ಲಿ
ನಿಂತು
ತಮ್ಮ
ಹಕ್ಕು
ಚಲಾಯಿಸುವ
ದೃಶ್ಯ
ಕಂಡುಬಂದವು.
ಪ್ರಮುಖವಾಗಿ
ಹಿರಿಯ
ನಾಗರೀಕರು,
ತಮ್ಮ
ಹಕ್ಕನ್ನು
ಚಲಾಯಿಸಲು
ಮತಗಟ್ಟೆಗೆ
ಬಂದರು.
ವಿಶೇಷ
ಚೇತನರು
ಕೂಡ
ತಪ್ಪದೇ
ಮತದಾನ
ಹಕ್ಕನ್ನು
ಪೂರೈಸಿದರು.
ಬಿಸಿಲು
ಲೆಕ್ಕಿಸದೆ
ಮತದಾರರು
ಮತಗಟ್ಟೆಗಳಿಗೆ
ಭೇಟಿ
ನೀಡಿ
ಮತದಾನ
ಹಕ್ಕನ್ನ
ಚಲಾಯಿಸಿದರು.

ಮೂಲಕ
2ನೇ
ಹಂತದ
ಮತದಾನ
ಶಾಂತಿಯುತವಾಗಿ
&
ಭರ್ಜರಿಯಾಗಿ
ಮುಕ್ತಾಯವಾಗಿದೆ.
ಹಾಗಾದರೆ
ಯುವ
ಮತದಾರರ
ಕಥೆ
ಏನು?

Lok Sabha Election 2024 Voting Completed Peacefully In 2nd Phase In Karnataka

ಯುವ
ಮತದಾರರಿಗೆ
ಭರ್ಜರಿ
ಉತ್ಸಾಹ!

ಇನ್ನು
ವಿವಿಧ
ಗ್ರಾಮಗಳಲ್ಲಿ
ಯುವ
ಮತದಾರರು
ಮೊದಲ
ಬಾರಿ
ತಮ್ಮ
ಹಕ್ಕನ್ನು
ಚಲಾಯಿಸಿ,
ಸಂತಸ
ವ್ಯಕ್ತಪಡಿಸಿದರು.
ಯಾವುದೇ
ಅಂಜಿಕೆ
&
ಭಯ
ಭೀತಿ
ಇಲ್ಲದೇ
ಮತದಾನ
ಮಾಡಿದರು.
ಪ್ರಜಾಪ್ರಭುತ್ವದ
ದೊಡ್ಡ
ಹಬ್ಬ,
ಮತದಾನ
ಪ್ರಕ್ರಿಯೆಯಲ್ಲಿ
ಯುವ
ಮತದಾರರು
ಕೂಡ
ಭಾಗಿ
ಆಗಿ
ಮತವನ್ನ
ಚಲಾಯಿಸುವ
ದೃಶ್ಯಗಳು
ಕಂಡುಬಂದವು.
ಇದೇ
ವೇಳೆ
ಮಾತನಾಡಿದ
ನೂಲ್ವಿ
ಗ್ರಾಮದ
ವೇದಾ
ಗಾಟಗೆ,
ಇದೇ
ಮೊದಲ
ಬಾರಿ
ಮತ
ಚಲಾಯಿಸಿದ್ದೇನೆ.
ಬಹಳ
ಖುಷಿ
ಆಗಿದ್ದು
ನನ್ನ
ಹಕ್ಕು
ಚಲಾಯಿಸಿದ್ದೇನೆ
ಎಂದರು.

ಅತಿ ಹೆಚ್ಚು ಮತದಾನ: ಮತ್ತೆ ದಾಖಲೆ ಬರೆಯಲಿದೆ ಶಿವಮೊಗ್ಗ? ಅತಿ
ಹೆಚ್ಚು
ಮತದಾನ:
ಮತ್ತೆ
ದಾಖಲೆ
ಬರೆಯಲಿದೆ
ಶಿವಮೊಗ್ಗ?

ಬೆನಕನಹಳ್ಳಿ
ಸೌಭಾಗ್ಯ
ಹಳೇಮನಿ,
ಮೊದಲ
ಬಾರಿ‌
ಮತದಾನ
ಮಾಡಿದ್ದು
ಸಂತೋಷ
ತಂದಿದೆ
ಎಂದರು.
ಈಗಾಗಲೇ
ಮತದಾನ
ಮಾಡುವ
ಕುರಿತು
ಅರಿತುಕೊಂಡಿದ್ದರಿಂದ,
ಯಾವುದೇ
ರೀತಿ
ಭಯವಿರಲಿಲ್ಲ
ಎಂದರು.
ಚಿಕ್ಕನೇರ್ತಿ
ಗ್ರಾಮದ
ಸ್ಪೂರ್ತಿ
ಗೋಣಿ,
ಸಹನಾ
ಗೋಣಿ
ಸೇರಿದಂತೆ
ರೊಟ್ಟಿಗವಾಡ
ಗ್ರಾಮದ
ಕಾವ್ಯಾ
ರಂಗಪ್ಪನವರ,
ಚೇತನಾ
ಬಡಿಗೇರ,
ಕಿರಣಗೌಡ
ಹಿರೇಗೌಡರ
&
ಉದಯಕುಮಾರ್
ಭೂತರೆಡ್ಡಿ
ಮತ್ತಿತರ
ಯುವ
ಮತದಾರರು
ಕೂಡ
ಮತ
ಹಾಕಿ,
ಸಂತಸ
ವ್ಯಕ್ತಪಡಿಸಿದರು.

ಒಂದೇ
ಕುಟುಂಬದ
96
ಮತದಾರರು!

ನೂಲ್ವಿ
ಗ್ರಾಮದ
ಕೊಪ್ಪದ
ಕುಟುಂಬದ
96
ಮತದಾರರು
ಹಕ್ಕನ್ನು
ಚಲಾಯಿಸಿದ್ದು
ತುಂಬಾನೆ
ವಿಶೇಷವಾಗಿತ್ತು.
ಪ್ರತಿ
ವರ್ಷದ
ರೀತಿ,

ಸಾರಿಯೂ
ಕೂಡ
ಚುನಾವಣೆಯಲ್ಲಿ
ಮತದಾನವನ್ನ
ಮಾಡಿ
ಸಂತಸಪಟ್ಟರು.
ಹಾಗೇ
ಹಿರಿಯರು
ಕೂಡ

ವಯಸ್ಸಿನಲ್ಲು
ಕೂಡ
ಬಿಸಿಲು
ಲೆಕ್ಕ
ಮಾಡದೆ,
ತಮ್ಮ
ಮತದಾನದ
ಹಕ್ಕು
ಚಲಾಯಿಸುವ
ಮೂಲಕ
ಪ್ರಜಾಪ್ರಭುತ್ವದ
ಹಬ್ಬಕ್ಕೆ
ಸಾಕ್ಷಿಯಾದ್ರು
ಮಹಿಳೆಯರ
ಮತದಾನ
ಪ್ರಮಾಣ
ಹೆಚ್ಚಿಸಲು
ಕುಂದಗೋಳದಲ್ಲಿ
ಸಖಿ
ಮತಗಟ್ಟೆ
ನಿರ್ಮಾಣ
ಮಾಡಲಾಗಿತ್ತು,
ಇದು
ಮತದಾರರ
ಗಮನ
ಸೆಳೆಯುವಲ್ಲಿ
ಯಶಸ್ವಿಯಾಗಿತ್ತು.

English summary

Voting Completed Peacefully In 2nd Phase In Karnataka For Lok Sabha Election 2024

Story first published: Tuesday, May 7, 2024, 18:49 [IST]