Home LATEST NEWS kannada ಇತ್ತೀಚಿನ ಸುದ್ದಿ Shakti scheme: ಯೋಜನೆ ಆರಂಭವಾದಾಗಿನಿಂದ ಇಲ್ಲಿಯವರೆಗೂ ಸಾರಿಗೆ ಬಸ್‌ಗಳಲ್ಲಿ ಪ್ರಯಾಣಿಸಿದ ಮಹಿಳೆಯರ ಸಂಖ್ಯೆ ಎಷ್ಟು ಕೋಟಿ?

Shakti scheme: ಯೋಜನೆ ಆರಂಭವಾದಾಗಿನಿಂದ ಇಲ್ಲಿಯವರೆಗೂ ಸಾರಿಗೆ ಬಸ್‌ಗಳಲ್ಲಿ ಪ್ರಯಾಣಿಸಿದ ಮಹಿಳೆಯರ ಸಂಖ್ಯೆ ಎಷ್ಟು ಕೋಟಿ?

1
0

Source :- ONE INDIA NEWS

Karnataka

oi-Madhusudhan KR

|

Published: Tuesday, May 7, 2024, 21:08 [IST]

Google Oneindia Kannada News

Shakti
Scheme:
ಕಾಂಗ್ರೆಸ್‌
ಸರ್ಕಾರದ
ನೇತೃತ್ವದಲ್ಲಿ
ಜಾರಿಗೆ
ತರಲಾದ
ಪ್ರಮುಖ
5
ಗ್ಯಾರಂಟಿಗಳಲ್ಲಿ
ಶಕ್ತಿ
ಯೋಜನೆಯೂ
ಒಂದಾಗಿದೆ.

ಯೋಜನೆಯಡಿ
ಸರ್ಕಾರಿ
ಬಸ್‌ಗಳಲ್ಲಿ
ಮಹಿಳೆಯರಿಗೆ
ಉಚಿತ
ಪ್ರಯಾಣಕ್ಕೆ
ಅವಕಾಶ
ಕಲ್ಪಿಸಿಕೊಡಲಾಗಿದ್ದು,
ಇದಕ್ಕೆ
ಉತ್ತಮ
ಸ್ಪಂದನೆ
ವ್ಯಕ್ತವಾಗುತ್ತಲೇ
ಇದೆ.
ಹಾಗಾದರೆ

ಯೋಜನೆ
ಜಾರಿಯಾದಗಿನಿಂದಲೂ
ಈವರೆಗೂ
ಎಷ್ಟು
ಕೋಟಿ
ಮಹಿಳೆಯರು
ಸಾರಿಗೆ
ಬಸ್‌ಗಳಲ್ಲಿ
ಉಚಿತ
ಪ್ರಯಾಣ
ಮಾಡಿದ್ದಾರೆ
ಎನ್ನುವ
ಮಾಹಿತಿಯನ್ನು
ಇಲ್ಲಿ
ತಿಳಿಯಿರಿ.

ರಾಜ್ಯದಲ್ಲಿ
ಶಕ್ತಿ
ಯೋಜನೆ
ಜಾರಿಯಾಗಿ
10
ತಿಂಗಳು
ಕಳೆದಿದ್ದು,
ಏಪ್ರಿಲ್​
ಅಂತ್ಯದವರೆಗೆ
ರಾಜ್ಯ
ರಸ್ತೆ
ಸಾರಿಗೆ
ಸಂಸ್ಥೆಯ
(KSRTC,
NWKSRTC,
KKRTC,
BMTC)
ನಾಲ್ಕು
ನಿಗಮಗಳ
ಬಸ್‌ಗ​ಳಲ್ಲಿ
ಬರೊಬ್ಬರಿ
200
ಕೋಟಿ
ಮಹಿಳೆಯರು
ಉಚಿತವಾಗಿ
ಪ್ರಯಾಣ
ಮಾಡಿದ್ದಾರೆ
ಎನ್ನುವ
ಮಾಹಿತಿ
ಲಭ್ಯವಾಗಿದೆ.

200 crore women traveled in transport buses since Shakti scheme start

ರಾಜ್ಯ
ಸರ್ಕಾರ
2023ರ
ಜೂನ್‌
11ರಿಂದ
ಶಕ್ತಿ
ಯೋಜನೆಯನ್ನು
ಪ್ರಾರಂಭಿಸಿದ್ದು,

ಯೋಜನೆ
ಅಡಿಯಲ್ಲಿ
ಮಹಿಳೆಯರು
ರಾಜ್ಯ
ಸಾರಿಗೆ
ಸಂಸ್ಥೆಯ
ನಾಲ್ಕು
ನಿಗಮಗಳ
ಬಸ್‌ಗಳಲ್ಲಿ
ಉಚಿತವಾಗಿ
ಪ್ರಯಾಣಿಸಬಹುದಾಗಿದೆ.ಈ
ಕುರಿತಂತೆ
ಕರ್ನಾಟಕ
ರಾಜ್ಯ
ರಸ್ತೆ
ಸಾರಿಗೆ
ಸಂಸ್ಥೆಯಿಂದ
ಮಾಹಿತಿ
ಬಿಡುಗಡೆ
ಮಾಡಿದ್ದು,
30-06-2023ರವರೆಗೆ
ನಾಲ್ಕು
ಸಾರಿಗೆ
ನಿಗಮಗಳಲ್ಲಿ
10,54,45,047
ಮಹಿಳೆಯರು
ಉಚಿತವಾಗಿ
ಪ್ರಯಾಣಿಸಿದ್ದಾರೆ.
ಇವರ
ಟಿಕೆಟ್
ಮೌಲ್ಯ
248,30,13,266
ರೂಪಾಯಿ
ಆಗಿದೆ
ಎಂದು
ತಿಳಿದುಬಂದಿದೆ.

ದಿನಾಂಕ
ಜೂಲೈ
01,
2023ರಿಂದ
31-07-2023ರವರೆಗೆ
19,63,00,625
ಮಹಿಳೆಯರು
ಉಚಿತವಾಗಿ
ಪ್ರಯಾಣಿಸಿದ್ದರೇ,
ದಿನಾಂಕ
01-08-2023ರಿಂದ
31-08-2023ರವರೆಗೆ
20,03,60,680
ಮಹಿಳೆಯರು,
ದಿನಾಂಕ
01-09-2023ರಿಂದ
30-09-2023ರವರೆಗೆ
18,95,49,754
ಮಹಿಳೆಯರು
ಉಚಿತವಾಗಿ
ಪ್ರಯಾಣಿಸಿರುವುದಾಗಿ
ಅಂಕಿ
ಅಂಶದ
ಮಾಹಿತಿ
ನೀಡಿದೆ.

Namma Metro: 3ನೇ ಹಂತದ ಯೋಜನೆ ನಿರ್ಮಾಣಕ್ಕೆ ಸಜ್ಜು: ಜಿಯೋಟೆಕ್ನಿಕಲ್ ಸರ್ವೇ ಆರಂಭ ಶೀಘ್ರNamma
Metro:
3ನೇ
ಹಂತದ
ಯೋಜನೆ
ನಿರ್ಮಾಣಕ್ಕೆ
ಸಜ್ಜು:
ಜಿಯೋಟೆಕ್ನಿಕಲ್
ಸರ್ವೇ
ಆರಂಭ
ಶೀಘ್ರ

ದಿನಾಂಕ
01-10-2023ರಿಂದ
31-10-2023ರವರೆಗೆ
18,26,17,460
ಮಹಿಳೆಯರು,
01-11-2023ರಿಂದ
30-11-2023ರವರೆಗೆ
18,25,74,439
ಮಹಿಳೆಯರು
ಉಚಿತವಾಗಿ
ಸಾರಿಗೆ
ಬಸ್‌ಗಳಲ್ಲಿ
ಸಂಚರಿಸಿದ್ದಾರೆ.
ದಿನಾಂಕ
01-12-2023ರಿಂದ
31-12-2023ರವರೆಗೆ
19,55,52,662
ಮಹಿಳೆಯರು,
ದಿನಾಂಕ
01-01-2024ರಿಂದ
31-01-2024ರವರೆಗೆ
19,26,34,708
ಮಹಿಳೆಯರು
ಉಚಿತವಾಗಿ
ನಾಲ್ಕು
ಸಾರಿಗೆ
ನಿಗಮಗಳಲ್ಲಿ
ಪ್ರಯಾಣ
ಮಾಡಿದ್ದಾರೆ
ಎಂದು
ತಿಳಿದುಬಂದಿದೆ.

ಒಟ್ಟಾರೆಯಾಗಿ
ದಿನಾಂಕ
11-06-2023ರಿಂದ
01-05-2023ರವರೆಗೆ
ಕೆಎಸ್‌ಆರ್‌ಟಿಸಿ
ಬಸ್‌ಗಳಲ್ಲಿ
60,52,88,107
ಮಹಿಳೆಯರು,
ಬಿಎಂಟಿಸಿ
ಬಸ್‌ನಲ್ಲಿ
63,61,69,156
ಮಹಿಳೆಯರು,
NWKSRTC
ಬಸ್‌ಗಳಲ್ಲಿ
46,59,20,579
ಮಹಿಳೆಯರು,
KKRTS
ಬಸ್‌ಗಳಲ್ಲಿ
29,70,02,860
ಸೇರಿದಂತೆ
ಒಟ್ಟು
200,43,80,702
ಮಹಿಳೆಯರು
ಉಚಿತವಾಗಿ
ಶಕ್ತಿ
ಯೋಜನೆಯ
ಡಿಯಲ್ಲಿ
ಸಂಚರಿಸಿದ್ದಾರೆ.
ಇನ್ನು
ಇದರ
ಒಟ್ಟು
ಟಿಕೆಟ್
ಮೊತ್ತ
4836,72,74,251
ರೂಪಾಯಿ
ಆಗಿದೆ
ಎಂದು
ಸಾರಿಗೆ
ಇಲಾಖೆ
ಮಾಹಿತಿ
ನೀಡಿದೆ.

English summary

200 crore women traveled in transport buses since Shakti scheme start in Karnataka

Story first published: Tuesday, May 7, 2024, 21:08 [IST]