Home LATEST NEWS kannada ಇತ್ತೀಚಿನ ಸುದ್ದಿ Rahul Gandhi white T-shirts: ರಾಹುಲ್ ಗಾಂಧಿ ಯಾವಾಗಲೂ ಬಿಳಿ ಟೀ ಶರ್ಟ್ ಧರಿಸೋದು ಯಾಕೆ?

Rahul Gandhi white T-shirts: ರಾಹುಲ್ ಗಾಂಧಿ ಯಾವಾಗಲೂ ಬಿಳಿ ಟೀ ಶರ್ಟ್ ಧರಿಸೋದು ಯಾಕೆ?

1
0

Source :- ONE INDIA NEWS

India

oi-Mamatha M

|

Published: Tuesday, May 7, 2024, 10:27 [IST]

Google Oneindia Kannada News

ನವದೆಹಲಿ,
ಮೇ.
07
:
ಕಳೆದ
ವರ್ಷ
ಕನ್ಯಾಕುಮಾರಿಯಿಂದ
ಕಾರ್ಶಮಿರದವರೆಗೆ
ನಡೆದ
ಭಾರತ್
ಜೋಡೋ
ಯಾತ್ರೆಯಲ್ಲಿ
ಹೆಚ್ಚು
ಜನರನ್ನು
ಆಕರ್ಷಿಸಿದ್ದು
ಕಾಂಗ್ರೆಸ್
ನಾಯಕ
ರಾಹುಲ್
ಗಾಂಧಿ
ಅವರ
ಟೀ
ಶರ್ಟ್.
ಹೌದು..
ಇಡೀ
ಯಾತ್ರೆಯುದ್ದಕ್ಕೂ
ಅವರು
ಧರಿಸಿದ್ದು
ಒಂದೇ
ತರದ
ಟೀ
ಶರ್ಟ್
ಅದು
ಬಿಳಿ
ಬಣ್ಣದ್ದು.

ಯಾತ್ರೆಯ
ವಿಷಯದ
ಜೊತೆಗೆ
ಜೊತೆಗೆ
ಹೆಚ್ಚು
ಜನರನ್ನು
ಕಾಡಿದ
ಪ್ರಶ್ನೆ
ರಾಹುಲ್
ಗಾಂಧಿ
ಏಕೆ
ಯಾವಾಗಲೂ
ಬಿಳಿ
ಬಣ್ಣದ
ಟೀ
ಶರ್ಟ್
ಧರಿಸುತ್ತಾರೆ
ಎಂಬುದು.
ಭಾರತ್‌
ಜೋಡೋ
ಯಾತ್ರೆ
ಮುಗಿದರೂ
ಕೂಡ
ಕಾಂಗ್ರೆಸ್
ನಾಯಕ
ರಾಹುಲ್
ಗಾಂಧಿ
ವೈಟ್
ಟೀ
ಶರ್ಟ್
ಧರಿಸುವುದನ್ನು
ಮುಂದುವರೆಸಿದ್ದಾರೆ.
ಲೋಕಸಭಾ
ಚುನಾವಣೆಯ
ಪ್ರಚಾರದಲ್ಲಿಯೂ
ಅವರು

ಟೀ
ಶರ್ಟ್
ಧರಿಸಿಯೇ
ಕಾಣಿಸಿಕೊಂಡಿದ್ದಾರೆ.
ಸದ್ಯ
ವರ್ಷದ
ಪ್ರಶ್ನೆಗೆ
ಉತ್ತರ
ಸಿಕ್ಕಿದೆ.
ಹೌದು…
ರಾಹುಲ್
ಗಾಂಧಿ
ಯಾಕೆ
ವೈಟ್
ಟೀ
ಶರ್ಟ್
ಧರಿಸುತ್ತಾರೆ
ಗೊತ್ತಾ?
ಇಲ್ಲಿದೆ
ನೋಡಿ
ಉತ್ತರ.

Why Rahul Gandhi stick to white t-shirts

ಬಟ್ಟೆ
ಬಗ್ಗೆ
ಹೆಚ್ಚು
ಯೋಚಿಸುವುದಿಲ್ಲ
ಅಂತೆ
ರಾಹುಲ್
ಗಾಂಧಿ!

ತಾವು
ಯಾಕೆ
ಯಾವಾಗಲೂ
ಬಿಳಿ
ಟೀ
ಶರ್ಟ್
ಧರಿಸುತ್ತಾರೆ
ಎಂಬ
ಬಗ್ಗೆ
ಅವರೆ
ಮಾಹಿತಿ
ನೀಡಿದ್ದಾರೆ.
ಸಾಮಾಜಿಕ
ಜಾಲತಾಣದಲ್ಲಿ
ಪೋಸ್ಟ್
ಹಂಚಿಕೊಂಡಿದ್ದು,

ಬಿಳಿ
ಬಣ್ಣದ
ಬಟ್ಟೆ
‘ಪಾರದರ್ಶಕತೆ’
ಮತ್ತು
‘ಸರಳತೆ’
ಯನ್ನು
ಸೂಚಿಸುತ್ತದೆ
ಎಂದಿದ್ದಾರೆ.
ಜೊತೆಗೆ
ತಾವು
ಬಟ್ಟೆಗಳ
ಬಗ್ಗೆ
ಹೆಚ್ಚು
ಯೋಚಿಸುವುದಿಲ್ಲ.
ನಾನು
ಸರಳವಾಗಿರಲು
ಬಯಸುತ್ತೇನೆ
ಎಂದು
ತಿಳಿಸಿದ್ದಾರೆ.
ಕಾಂಗ್ರೆಸ್

ವಿಡಿಯೋಗಳನ್ನು
ತನ್ನ
ಸಾಮಾಜಿಕ
ಮಾಧ್ಯಮಗಳಲ್ಲಿ
ಪೋಸ್ಟ್
ಮಾಡಿದೆ.

KS Eshwarappa: ಪ್ರತಿಸ್ಪರ್ಧಿ ರಾಘವೇಂದ್ರ ಪರ ಮತ ಯಾಚಿಸಿದ್ರಾ ಕೆ ಎಸ್ ಈಶ್ವರಪ್ಪ..? ಏನಿದು ಸುದ್ದಿ?KS
Eshwarappa:
ಪ್ರತಿಸ್ಪರ್ಧಿ
ರಾಘವೇಂದ್ರ
ಪರ
ಮತ
ಯಾಚಿಸಿದ್ರಾ
ಕೆ
ಎಸ್
ಈಶ್ವರಪ್ಪ..?
ಏನಿದು
ಸುದ್ದಿ?

ಕನ್ಯಾಕುಮಾರಿ
ಟು
ಕಾಶ್ಮೀರ
ನಡೆದ
ಭಾರತ್
ಜೋಡೋ
ಯಾತ್ರೆಯಿಂದ
ರಾಹುಲ್
ಬಿಳಿ
ಟೀ
ಶರ್ಟ್
ಧರಿಸಿಸಲು
ಆರಂಭಿಸಿದ್ದಾರೆ.
ರಾಹುಲ್
ಗಾಂಧಿ
ಲೋಕಸಭಾ
ಚುನಾವಣೆಯ
ಎರಡನೇ
ಹಂತದ
ಮತದಾನಕ್ಕೆ
ಸಿದ್ಧವಾಗುತ್ತಿದ್ದ
ಕರ್ನಾಟಕಕ್ಕೆ
ಬಂದಿದ್ದ
ವೇಳೆ

ವಿಡಿಯೋ
ಶೂಟ್
ಮಾಡಲಾಗಿದೆ.
‘ಕರ್ನಾಟಕದಲ್ಲಿ
ಒಂದು
ದಿನದ
ಪ್ರಚಾರ’
ಎಂಬ
ಶೀರ್ಷಿಕೆಯ
ವಿಡಿಯೋ
ಇದಾಗಿದೆ.

Why Rahul Gandhi stick to white t-shirts

ಕೆಲವು
ರ್ಯಾಪಿಡ್
ಫೈರ್
ಪ್ರಶ್ನೆಗಳಿಗೆ
ರಾಹುಲ್
ಗಾಂಧಿ
ಉತ್ತರಿಸಿದ್ದಾರೆ.
ಜೊತೆಗೆ
ಪ್ರಶ್ನೆಗಳನ್ನು
ಕೇಳಿದ್ದಾರೆ.

ವೇಳೆ
ಅವರ
ಜೊತೆಯಲ್ಲಿ
ಕಾಂಗ್ರೆಸ್
ಅಧ್ಯಕ್ಷ
ಮಲ್ಲಿಕಾರ್ಜುನ
ಖರ್ಗೆ
ಮತ್ತು
ಮುಖ್ಯಮಂತ್ರಿ
ಸಿದ್ದರಾಮಯ್ಯ
ಇದ್ದಾರೆ.
ಪ್ರಚಾರದ
ಅತ್ಯುತ್ತಮ
ಭಾಗ
ಯಾವುದು
ಎಂಬ
ಬಗ್ಗೆ
ಕೇಳಿದಾಗ,

ಯಾವಾಗ
ಕೊನೆಗೊಳ್ಳುತ್ತದೆಯೋ
ಅದು’
ಎಂದು
ಫಟ್
ಎಂದು
ಉತ್ತರಿಸುತ್ತಾರೆ.

“ನನ್ನ
ದೃಷ್ಟಿಯಲ್ಲಿ,
ಸಿದ್ಧಾಂತದ
ಸ್ಪಷ್ಟ
ತಿಳುವಳಿಕೆಯಿಲ್ಲದೆ
ನೀವು
ಅಧಿಕಾರದ
ಕಡೆಗೆ
ದೊಡ್ಡ
ಸಂಘಟನೆಯಾಗಿ
ಹೋಗಲು
ಸಾಧ್ಯವಿಲ್ಲ.
ಬಡವರ
ಪರ,
ಮಹಿಳಾ
ಪರ
ಎಲ್ಲರನ್ನೂ
ಸಮಾನವಾಗಿ
ಪರಿಗಣಿಸುವ
ನಮ್ಮ
ಸಿದ್ಧಾಂತವನ್ನು
ನಾವು
ಜನರಿಗೆ
ಮನವರಿಕೆ
ಮಾಡಬೇಕು.
ಆದ್ದರಿಂದ
ಸಾಂಸ್ಥಿಕ
ಮಟ್ಟದಲ್ಲಿ,
ರಾಷ್ಟ್ರೀಯ
ಮಟ್ಟದಲ್ಲಿ
ಹೋರಾಟವು
ಯಾವಾಗಲೂ
ಸಿದ್ಧಾಂತದ
ಬಗ್ಗೆ
ಇರುತ್ತದೆ”
ಎಂದು
ರಾಹುಲ್
ಗಾಂಧಿ
ಹೇಳಿದ್ದಾರೆ.

ವಿಡಿಯೋದಲ್ಲಿ
ಅವರು
ತಮ್ಮ
ಭಾರತ್
ಜೋಡೋ
ಯಾತ್ರೆಯ
ಬಗ್ಗೆಯೂ
ಮಾತನಾಡಿದ್ದಾರೆ.
ಇದು
ಪ್ರಚಾರವಲ್ಲ
ಆದರೆ,
ಇನ್ನೂ
ಹೆಚ್ಚಿನ
ಕಠಿಣ
ಕೆಲಸದಲ್ಲಿ
ತೊಡಗಿಸಿಕೊಂಡಿದ್ದೇವೆ
ಎಂದು
ಹೇಳಿದ್ದಾರೆ.
ಇದೇ
ವೇಳೇ
ಪ್ರಚಾರದಲ್ಲಿ
ಯಾವುದು
ಇಷ್ಟ
ಅಥವಾ
ಇಷ್ಟವಿಲ್ಲ
ಎಂದು
ರಾಹುಲ್
ಗಾಂಧಿ,
ಮಲ್ಲಿಕಾರ್ಜುನ
ಖರ್ಗೆ
ಅವರಿಗೆ
ಪ್ರಶ್ನೆ
ಮಾಡಿದ್ದಾರೆ.
ಇದಕ್ಕೆ
ಉತ್ತರವಾಗಿ,
“ಕೆಟ್ಟದ್ದೇನೂ
ಇಲ್ಲ.
ದೇಶಕ್ಕಾಗಿ
ನಾವು
ಇದನ್ನು
ಮಾಡುವುದರಿಂದ
ಒಳ್ಳೆಯದು.
ದೇಶವನ್ನು
ಹಾಳು
ಮಾಡುವವರನ್ನು
ತಡೆಯುವ
ಕೆಲಸ
ಮಾಡುವಾಗ,
ನಾವು
ದೇಶಕ್ಕಾಗಿ
ಏನಾದರೂ
ಮಾಡುತ್ತಿದ್ದೇವೆ
ಎಂದು
ನಾವು
ಭಾವಿಸುತ್ತೇವೆ”
ಎಂದಿದ್ದಾರೆ.

English summary

Rahul Gandhi white T-shirts: Why congress leader Rahul Gandhi always wears white T-shirt? Know more about this.

Story first published: Tuesday, May 7, 2024, 10:27 [IST]