Home LATEST NEWS kannada ಇತ್ತೀಚಿನ ಸುದ್ದಿ Lok Sabha Election Phase 3 Polling LIVE: ರಾಜ್ಯದ 14 ಕ್ಷೇತ್ರಗಳಲ್ಲಿ ಬಿರುಸಿನ ಮತದಾನ;...

Lok Sabha Election Phase 3 Polling LIVE: ರಾಜ್ಯದ 14 ಕ್ಷೇತ್ರಗಳಲ್ಲಿ ಬಿರುಸಿನ ಮತದಾನ; ಮತ ಚಲಾಯಿಸಿದ ಗಣ್ಯರು

1
0

Source :- ONE INDIA NEWS

India

oi-Naveen Kumar N

|

Updated: Tuesday, May 7, 2024, 10:34 [IST]

Google Oneindia Kannada News

ಪ್ರಜಾಪ್ರಭುತ್ವದ ಅತಿ ದೊಡ್ಡ ಹಬ್ಬ, ಲೋಕಸಭಾ ಚುನಾವಣೆಯ ಮೂರನೇ ಹಂತದ ಮತದಾನ ಇಂದು ನಡೆಯಲಿದೆ. ಏಪ್ರಿಲ್ 19 ಮತ್ತು ಏಪ್ರಿಲ್ 26 ರಂದು ಮೊದಲ ಎರಡು ಹಂತಗಳ ಮತದಾನ ಮುಗಿದ ನಂತರ, 18 ನೇ ಲೋಕಸಭೆಯ ಮೂರನೇ ಹಂತದ ಚುನಾವಣೆಗೆ ವೇದಿಕೆ ಸಿದ್ಧವಾಗಿದೆ.

ಮೂರನೇ ಹಂತದಲ್ಲಿ 10 ರಾಜ್ಯಗಳು ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳನ್ನು ಒಳಗೊಂಡ 94 ಲೋಕಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ಕರ್ನಾಟಕ, ಕೇರಳ, ಬಿಹಾರ, ಛತ್ತೀಸ್‌ಗಢ, ಮಧ್ಯಪ್ರದೇಶ, ಮಹಾರಾಷ್ಟ್ರ, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳ ಸಹಿತ ಪ್ರಮುಖ ರಾಜ್ಯಗಳಲ್ಲಿ 3 ನೇ ಹಂತದಲ್ಲಿ ಮತದಾನ ನಡೆಯಲಿದೆ.

karnataka-lok-sabha-election-2024-phase-3-voting-live-news-key-highlights-voters-turnout-in-kannada

ಕರ್ನಾಟಕದಲ್ಲಿ 14 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ, ಎರಡನೇ ಹಂತದ ಮತದಾನದಲ್ಲಿ ರಾಜ್ಯದಲ್ಲಿ ಈಗಾಗಲೇ 14 ಕ್ಷೇತ್ರಗಳ ಮತದಾನ ಮುಕ್ತಾಯವಾಗಿದೆ. ಇಂದು ಉಳಿದ 14 ಕ್ಷೇತ್ರಗಳ ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ.

ಚಿಕ್ಕೋಡಿ, ಬೆಳಗಾವಿ, ಬಾಗಲಕೋಟೆ, ಬಿಜಾಪುರ, ಗುಲ್ಬರ್ಗ, ರಾಯಚೂರು, ಬೀದರ್, ಕೊಪ್ಪಳ, ಬಳ್ಳಾರಿ, ಹಾವೇರಿ, ಧಾರವಾಡ, ಉತ್ತರ ಕನ್ನಡ, ದಾವಣಗೆರೆ, ಶಿವಮೊಗ್ಗ ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ.

ಬೆಳಗಾವಿ, ಹಾವೇರಿ ಮತ್ತು ಶಿವಮೊಗ್ಗ ಕ್ಷೇತ್ರಗಳು ಭಾರಿ ಕುತೂಹಲ ಕೆರಳಿಸಿರುವ ಕ್ಷೇತ್ರಗಳಾಗಿವೆ. ಶಿವಮೊಗ್ಗದಲ್ಲಿ ಈಶ್ವರಪ್ಪ ಬಂಡಾಯ ಅಭ್ಯರ್ಥಿಯಾಗಿ ನಿಂತಿರುವ ಕಾರಣ, ಬಿಜೆಪಿ ಗೆಲುವು ಕಷ್ಟವಾಗುತ್ತಾ ಎನ್ನುವ ಕುತೂಹಲ ಇದೆ.

ಶ್ರೀರಾಮುಲು (ಬಳ್ಳಾರಿ), ಜಗದೀಶ್ ಶೆಟ್ಟರ್ (ಬೆಳಗಾವಿ), ಪ್ರಿಯಾಂಕ ಜಾರಕಿಹೊಳಿ (ಚಿಕ್ಕೋಡಿ), ವಿಶ್ವೇಶ್ವರ ಹೆಗಡೆ ಕಾಗೇರಿ (ಉತ್ತರ ಕನ್ನಡ), ಬಸವರಾಜ ಬೊಮ್ಮಾಯಿ (ಹಾವೇರಿ), ಬಿವೈ ರಾಘವೇಂದ್ರ (ಶಿವಮೊಗ್ಗ) ಕಣದಲ್ಲಿರುವ ಪ್ರಮುಖ ನಾಯಕರಾಗಿದ್ದಾರೆ.

Newest FirstOldest First

ಕರ್ನಾಟಕ

ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ದೂರು

ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ದೂರು

ಬಿಜೆಪಿ ಸದಸ್ಯರು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ದೂರು ದಾಖಲಿಸಲಿದ್ದಾರೆ. ಮತದಾನ ಮಾಡಿದ ಬಳಿಕ ಮತಗಟ್ಟೆಯೊಳಗೆ ಪೋಸ್ ನೀಡಿದ್ದಕ್ಕಾಗಿ ಮತ್ತು ಅಭ್ಯರ್ಥಿಯಾಗಿರುವ ಅವರ ಪುತ್ರ ಮೃಣಾಲ್ ಅವರ ಕ್ರಮಸಂಖ್ಯೆಯನ್ನು ಸೂಚಿಸಿರುವುದು ಚುನಾವಣೆ ನೀತಿ ಸಂಹಿತೆಯ ಉಲ್ಲಂಘನೆ ಎಂದು ಆರೋಪಿಸಿದ್ದಾರೆ.

ಗುಜರಾತ್

ಆಟೋಗ್ರಾಫ್ ಕೊಟ್ಟ ಮೋದಿ

Karnataka Lok Sabha Election 2024 Voting LIVE

ಮೂರನೇ ಹಂತದ ಲೋಕಸಭಾ ಚುನಾವಣೆಯ ವೇಳೆ ಅಹಮದಾಬಾದ್‌ನ ಅಹಮದಾಬಾದ್‌ನಲ್ಲಿ ಮತದಾನ ಕೇಂದ್ರದಲ್ಲಿ ಮತದಾನ ಮಾಡಿದ ನಂತರ ಬೆಂಬಲಿಗರಿಗೆ ಹಸ್ತಾಕ್ಷರ ನೀಡಿದ ಪ್ರಧಾನಿ ನರೇಂದ್ರ ಮೋದಿ.

ಗುಜರಾತ್

ಅಮಿತ್ ಶಾ ಕುಟುಂಬದಿಂದ ಮತದಾನ

ಅಮಿತ್ ಶಾ ಕುಟುಂಬದಿಂದ ಮತದಾನ

ಲೋಕಸಭೆ ಚುನಾವಣೆಗೆ ಮತ ಚಲಾಯಿಸಿದ ನಂತರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಪತ್ನಿ ಸೋನಾಲ್ ಶಾ, ಮಗ ಜಯ್ ಶಾ ಮತ್ತು ಸೊಸೆ ರಿಷಿತಾ ಪಟೇಲ್ ಅವರೊಂದಿಗೆ ತಮ್ಮ ಫೋಟೊಗೆ ಫೋಸ್ ಕೊಟ್ಟರು.

ಕರ್ನಾಟಕ

ದೇಶದ ರಕ್ಷಣೆಗೆ ಮತದಾನ

ದೇಶದ ರಕ್ಷಣೆಗೆ ಮತದಾನ

ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕುಟುಂಬ ಸಮೇತ ಮತದಾನ ಮಾಡಿದ್ದಾರೆ. ವಿಜಯಪುರ ನಗರದ ಶ್ರೀ ಸಿದ್ದೇಶ್ವರ ಪ್ರಾಥಮಿಕ ಮತ್ತು ಪ್ರೌಢ ಶಾಲೆಯಲ್ಲಿರುವ ಮತ ಕೇಂದ್ರ-70 ರಲ್ಲಿ ಕುಟುಂಬ ಸಮೇತ ತೆರಳಿ ಮತ ಚಲಾಯಿಸಿದೆ. ಪ್ರತಿಯೊಬ್ಬರು ತಪ್ಪದೆ ಮತ ಕೇಂದ್ರಕ್ಕೆ ತೆರಳಿ, ಮತಯಾಚನೆ ಮಾಡುವ ಮೂಲಕ ಉತ್ತಮ ಸರ್ಕಾರ ರಚನೆಗೆ ಕೈಜೋಡಿಸಬೇಕು ಎಂದು ಮನವಿ ಮಾಡಿದ್ದಾರೆ.

ಕರ್ನಾಟಕ

ಮತ ಹಾಕಿದ ಜಗದೀಶ್ ಶೆಟ್ಟರ್

ಮತ ಹಾಕಿದ ಜಗದೀಶ್ ಶೆಟ್ಟರ್

ಬೆಳಗಾವಿಯ ವಿಶ್ವೇಶ್ವರಯ್ಯ ನಗರದಲ್ಲಿ ಮತ ಚಲಾಯಿಸಿದ ಬೆಳಗಾವಿ ಸಂಸದೆ ಮಂಗಲ ಸುರೇಶ್ ಅಂಗಡಿ, ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಮತ ಚಲಾವಣೆ ಮಾಡಿದರು.

ವಿವಿಧ ರಾಜ್ಯಗಳ ಮತದಾನ ವಿವರ

ಬೆಳಗ್ಗೆ 9 ಗಂಟೆ ವೇಳೆಗೆ ಗೋವಾದಲ್ಲಿ ಶೇಕಡಾ 13.02 ರಷ್ಟು ಮತದಾನವಾಗಿದೆ. ಛತ್ತೀಸ್‌ಗಢದಲ್ಲಿ ಏಳು ಲೋಕಸಭಾ ಕ್ಷೇತ್ರಗಳಲ್ಲಿ ಶೇಕಡಾ 13.24 ರಷ್ಟು ಮತದಾನವಾಗಿದೆ. ಬಾರಾಮತಿ ಲೋಕಸಭಾ ಕ್ಷೇತ್ರದಲ್ಲಿ ಶೇಕಡಾ 5.77 ರಷ್ಟು ಮತದಾನವಾಗಿದ್ದರೆ. ಉತ್ತರ ಪ್ರದೇಶದ ಹತ್ತು ಕ್ಷೇತ್ರಗಳಲ್ಲಿ ಶೇಕಡಾ 13 ರಷ್ಟು ಮತದಾನವಾಗಿದೆ.

ಕರ್ನಾಟಕ

ಮೊದಲ ಬಾರಿ ಮತ ಹಾಕಿದ ಖುಷಿ

ಮೊದಲ ಬಾರಿ ಮತ ಹಾಕಿದ ಯುವ ಮತದಾರರು ಖುಷಿಪಟ್ಟರು.

Advertisement

ಪ್ರಿಯಾಂಕ್ ಖರ್ಗೆ ಮತದಾನ

Karnataka Lok Sabha Election 2024 Voting LIVE

ಗ್ರಾಮೀಣಾಭಿವೃದ್ದಿ ಹಾಗೂ ಪಂಚಾಯತ್ ರಾಜ್ ಸಚಿವರಾದ ಪ್ರಿಯಾಂಕ್ ಖರ್ಗೆ, ಅವರ ಧರ್ಮಪತ್ನಿ ಶೃತಿ ಖರ್ಗೆ ಅವರು ಚಿತ್ತಾಪುರ ವಿಧಾನಸಭಾ ಮತಕ್ಷೇತ್ರದ ಗುಂಡಗುರ್ತಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬೂತ್ ನಂಬರ್ 26 ರಲ್ಲಿ ಮತದಾನ ಮಾಡಿದರು.

ಮಲ್ಲಿಕಾರ್ಜುನ ಖರ್ಗೆ ಮತದಾನ

ಎಐಸಿಸಿ ಅರ್ಧಯಕ್ಷ ಮಲ್ಲಿಕಾರ್ಜುನ ಖರ್ಗೆ ಕಲಬುರಗಿಯಲ್ಲಿ ಮತದಾನ ಮಾಡಿದರು. ಬಸವನಗರದ ಸರ್ಕಾರಿ ಶಾಲೆಯ ಮತಗಟ್ಟೆಯಲ್ಲಿ ಮತದಾನ ಮಾಡಿದ ಬಳಿಕ ಮಾತನಾಡಿದ ಅವರು, ಇಂಡಿಯಾ ಒಕ್ಕೂಟದ ಅಭ್ಯರ್ಥಿಗಳು ಗೆಲ್ಲುವ ವಿಶ್ವಾಸವಿದೆ ಎಂದು ಹೇಳಿದರು.

ಬಿಹಾರ, ಅಸ್ಸಾಂನಲ್ಲಿ ಬಿರುಸಿನ ಮತದಾನ

ಮೂರನೇ ಹಂತದ ಲೋಕಸಭಾ ಚುನಾವಣೆ ಬಿರುಸು ಪಡೆದುಕೊಂಡಿದ್ದು, ಬೆಳಗ್ಗೆ 9 ಗಂಟೆಗೆ ವೇಳೆಗೆ ಅಸ್ಸಾಂನಲ್ಲಿ 10.1% ಮತದಾನವಾಗಿದ್ದು, ಬಿಹಾರದಲ್ಲಿ 10% ಮತದಾನವಾಗಿದೆ ಎಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ.

ಕರ್ನಾಟಕ

ಲಕ್ಷ್ಮೀ ಹೆಬ್ಬಾಳಕರ್ ಕುಟುಂಬಸ್ಥರ ಮತದಾನ

Karnataka Lok Sabha Election 2024 Voting LIVE

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಅವರು, ವಿಜಯನಗರದ ಸರಕಾರಿ ಮರಾಠಿ ಪ್ರಾಥಮಿಕ ಪಾಠ ಶಾಲೆಯ ಬೂತ್ ನಂಬರ್ 61ರಲ್ಲಿ ಕುಟುಂಬ ಸಮೇತ ಆಗಮಿಸಿ ಮತದಾನ ಮಾಡಿದರು.

ಕರ್ನಾಟಕ

ಕರ್ನಾಟಕದಲ್ಲಿ 9.45% ಮತದಾನ

ಕರ್ನಾಟಕದಲ್ಲಿ 9.45% ಮತದಾನ

ಕ್ಷೇತ್ರವಾರು ಮತದಾನ

Advertisement

ಕರ್ನಾಟಕ

ಕರ್ನಾಟಕದಲ್ಲಿ 9.45% ಮತದಾನ

ಕರ್ನಾಟಕದಲ್ಲಿ 9.45% ಮತದಾನ

ಕ್ಷೇತ್ರವಾರು ಮತದಾನ

ಕರ್ನಾಟಕ

ಮತ ಹಾಕಿದವರಿಗೆ ಸಸಿ ವಿತರಣೆ

ಮತ ಹಾಕಿದವರಿಗೆ ಸಸಿ ವಿತರಣೆ

ಶಿವಮೊಗ್ಗ ಜಿಲ್ಲೆಯ, ಶಿಕಾರಿಪುರ ತಾಲೂಕಿನ ಶಿರಳಕೊಪ್ಪ ಪುರಸಭಾ ಕಚೇರಿಯಲ್ಲಿ ಸ್ಥಾಪಿಸಲಾಗಿರುವ “ಮಾದರಿ ಮತಗಟ್ಟೆ”ಯಲ್ಲಿ ಮತ ಚಲಾಯಿಸಿದ ಮತದಾರರಿಗೆ ಸಸಿಗಳನ್ನು ವಿತರಣೆ ಮಾಡುವ ಮೂಲಕ, ಮತದಾನಕ್ಕೆ ಪ್ರೇರಣೆ ನೀಡಲಾಯಿತು.

ಕರ್ನಾಟಕ

ಬಿಎಸ್‌ವೈ ಕುಟುಂಬದಿಂದ ಮತದಾನ

ಬಿಎಸ್‌ವೈ ಕುಟುಂಬದಿಂದ ಮತದಾನ

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಮಾಜಿ ಮುಖ್ಯಮಂತ್ರಿ ಮತ್ತು ಕೇಂದ್ರ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ, ಶಿವಮೊಗ್ಗ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಶಿಕಾರಿಪುರದ ತಾಲ್ಲೂಕು ಪಂಚಾಯತ್ ಕಾರ್ಯಾಲಯದಲ್ಲಿ ಮತದಾನ ಮಾಡಿದರು.

ಕರ್ನಾಟಕ

ಕರ್ನಾಟಕದಲ್ಲಿ 9.45% ಮತದಾನ

ಬೆಳಗ್ಗೆ 9 ಗಂಟೆ ವೇಳೆಗೆ ಕರ್ನಾಟಕದ 14 ಕ್ಷೇತ್ರಗಳಲ್ಲಿ 9.45% ಮತದಾನವಾಗಿದೆ. ಶಿವಮೊಗ್ಗದಲ್ಲಿ 11.07% ರಷ್ಟು ಮತದಾನವಾಗಿದ್ದು ಹೆಚ್ಚು ಮತದಾನವಾದ ಕ್ಷೇತ್ರವಾಗಿದೆ. ಉಳಿದಂತೆ.
ಕ್ಷೇತ್ರವಾರು ಮತದಾನ
ಬಾಗಲಕೋಟೆ 8.59%,
ಬಳ್ಳಾರಿ: 10.37%
ಬೆಳಗಾವಿ: 9.48%
ಬೀದರ್: 8.9%
ಚಿಕ್ಕೋಡಿ: 10.81%
ದಾವಣಗೆರೆ: 9.11%
ಧಾರವಾಡ: 9.38%
ಹಾವೇರಿ: 8.62%
ಕಲಬುರಗಿ: 8.71%
ಕೊಪ್ಪಳ: 8.79%
ರಾಯಚೂರು: 8.27%
ಶಿವಮೊಗ್ಗ: 11.39%
ಉತ್ತರ ಕನ್ನಡ: 11.07%
ವಿಜಯಪುರ: 9.26%

ಕರ್ನಾಟಕ

ಮತದಾರರಿಗೆ ಸತ್ಕಾರ

ಮತದಾರರಿಗೆ ಸತ್ಕಾರ

ಮತ ಹಾಕುವವರಿಗೆ ಚುನಾವಣಾಧಿಕಾರಿಗಳ ಸತ್ಕಾರ

ಕರ್ನಾಟಕ

ಮತ ಚಲಾಯಿಸಿದ ಕೆಎಸ್ ಈಶ್ವರಪ್ಪ

ಶಿವಮೊಗ್ಗ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಕೆ.ಎಸ್. ಈಶ್ವರಪ್ಪ, ಪುತ್ರ ಕಾಂತೇಶ್ ಸೇರಿದಂತೆ ಕುಟುಂಬದ ಜೊತೆಗೂಡಿ ಮತದಾನ ಮಾಡಿದರು. ಶಿವಮೊಗ್ಗ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮತದಾನ ಮಾಡಿದರು.

ಕರ್ನಾಟಕ

ಪ್ರಜೆಗಳೇ ಪ್ರಭುಗಳು

ಪ್ರಜೆಗಳೇ ಪ್ರಭುಗಳು

ಶಿವಮೊಗ್ಗ ಜಿಲ್ಲಾ ಪಂಚಾಯತ್ ಆವರಣದಲ್ಲಿ ನಿರ್ಮಿಸಿರುವ ಮತಗಟ್ಟೆಯನ್ನು ಅರಮನೆಯ ವೈಭವ ಮಾದರಿಯಲ್ಲಿದ್ದು, ಗಮನ ಸೆಳೆಯುತ್ತಿದೆ. ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಪ್ರಭುಗಳು ಎಂಬ ಕಲ್ಪನೆಯೊಂದಿಗೆ ಈ ಮತಗಟ್ಟೆಯನ್ನು ಸಿದ್ಧಪಡಿಸಲಾಗಿದೆ, ಮತದಾರರು ರಾಜರಂತೆ ಫೋಸ್ ಕೊಟ್ಟರು.

ಕರ್ನಾಟಕ

ಮತದಾರರಿಗೆ ಪಾನೀಯ ನೀಡಿ ಸ್ವಾಗತ

ಮತದಾರರಿಗೆ ಪಾನೀಯ ನೀಡಿ ಸ್ವಾಗತ

ಕೊಪ್ಪಳ ಜಿಲ್ಲೆಯ ಗಂಗಾವತಿ ವಿಧಾನಸಭಾ ಕ್ಷೇತ್ರದ ವಡ್ಡರಟ್ಟಿ ಸಖಿ ಮತಗಟ್ಟೆಯಲ್ಲಿ ಮಹಿಳಾ ಮತಗಟ್ಟೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಮತದಾರರನ್ನು ಆದರದಿಂದ ಸ್ವಾಗತಿಸಿ ವೆಲ್ ಕಮ್ ಡ್ರಿಂಕ್ ನೀಡಿ ಸತ್ಕರಿಸಿದರು.

ಗುಜರಾತ್

ಅಮಿತ್ ಶಾ ಮತದಾನ

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಗುಜರಾತ್‌ನ ಅಹಮದಾಬಾದ್‌ನ ಮತಗಟ್ಟೆಯಲ್ಲಿ 2024 ರ ಲೋಕಸಭಾ ಚುನಾವಣೆಗೆ ತಮ್ಮ ಹಕ್ಕು ಚಲಾಯಿಸಿದರು. ಅಮಿತ್ ಶಾ ಗಾಂಧಿನಗರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದರೆ, ಕಾಂಗ್ರೆಸ್ ತನ್ನ ಪಕ್ಷದ ಕಾರ್ಯದರ್ಶಿ ಸೋನಾಲ್ ಪಟೇಲ್ ಅವರನ್ನು ಗಾಂಧಿನಗರದಿಂದ ತನ್ನ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿದೆ.

ಕರ್ನಾಟಕ

ಪ್ರಲ್ಹಾದ್ ಜೋಶಿ ಮತದಾನ

ಪ್ರಲ್ಹಾದ್ ಜೋಶಿ ಮತದಾನ

ಹುಬ್ಬಳ್ಳಿ ಲೋಕಸಭಾ ಕ್ಷೇತ್ರದಲ್ಲಿ ಐದನೇ ಬಾರಿ ಕಣಕ್ಕಿಳಿದಿರುವ ಪ್ರಲ್ಹಾದ್ ಜೋಶಿ ತಮ್ಮ ಕುಟುಂಬ ಸದಸ್ಯರ ಸಮೇತ ಆಗಮಿಸಿ ಮತ ಚಲಾಯಿಸಿದ್ದಾರೆ, ಹುಬ್ಬಳ್ಳಿ ಭವಾನಿ ನಗರದ ಚಿನ್ಮಯಿ ಶಾಲೆಯಲ್ಲಿ ಮತದಾನ ಮಾಡಿದ್ದಾರೆ.

ಮಹಾರಾಷ್ಟ್ರ

ರಿತೇಶ್ ದೇಶ್‌ಮುಖ್ ದಂಪತಿ ಮತದಾನ

ಬಾಲಿವುಡ್ ನಟ ರಿತೇಶ್ ದೇಶ್‌ಮುಖ್ ಮತ್ತು ಹೆಂಡತಿ ಜೆನಿಲಿಯಾ ದೇಶ್‌ಮುಖ್ ಲಾತೂರ್ ನಲ್ಲಿ ತಮ್ಮ ಮತ ಚಲಾಯಿಸಿದರು. ಎನ್‌ಡಿಯ ಅಭ್ಯರ್ಥಿಯಾಗಿ ಸುಧಾಕರ್ ತುಕಾರಾಮ್ ಶ್ರಂಗರೆ ಸ್ಪರ್ಧಿಸಿದ್ದು, ಇಂಡಿಯಾ ಒಕ್ಕೂಟದ ಅಭ್ಯರ್ಥಿಯಾಗಿ ಕಾಲ್ಗೆ ಶಿವಾಜಿ ಬಂಡಪ್ಪ ಸ್ಪರ್ಧೆ ಮಾಡಿದ್ದಾರೆ.

ಶಿವಮೊಗ್ಗದಲ್ಲಿ ಬಿಜೆಪಿ vs ಕಾಂಗ್ರೆಸ್ ಫೈಟ್

ಶಿವಮೊಗ್ಗದಲ್ಲಿ ಬಿಜೆಪಿ vs ಕಾಂಗ್ರೆಸ್ ಫೈಟ್

ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರಹಣಾಹಣಿ ಇದೆ.

ಕನ್ನಡದಲ್ಲಿ ಮೋದಿ ಟ್ವೀಟ್

ಪ್ರಧಾನಿ ನರೇಂದ್ರ ಮೋದಿ ಕನ್ನಡದಲ್ಲಿ ಕೂಡ ಟ್ವೀಟ್ ಮಾಡಿದ್ದು ಎಲ್ಲರಿಗೂ ಮತದಾನ ಮಾಡುವಂತೆ ಮನವಿ ಮಾಡಿದ್ದಾರೆ. ಚುನಾವಣೆ ಪ್ರಕ್ರಿಯೆಯಲ್ಲಿ ಎಲ್ಲರೂ ಭಾಗವಹಿಸಿದರೆ ಚುನಾವಣೆ ಮತ್ತಷ್ಟು ರೋಮಾಂಚನಕಾರಿಯಾಗುತ್ತದೆ ಎಂದು ಹೇಳಿದರು.

ಕರ್ನಾಟಕ

ಮಂಗಳವಾರ ಅದೃಷ್ಟ ಎಂದ ಉಮೇಶ್ ಯಾದವ್

ಕಲಬುರಗಿಯ ಜಾರ್ಜ್ ಶಾಲೆಯಲ್ಲಿ ಮತ ಚಲಾಯಿಸಿದವರಲ್ಲಿ ನಾನೇ ಮೊದಲಿಗ, ಮಂಗಳವಾರ ನನಗೆ ಯಾವಾಗಲೂ ಅದೃಷ್ಟ. ಕಲಬುರಗಿಯಲ್ಲಿ ಬಿಜೆಪಿ ಐತಿಹಾಸಿಕ ಗೆಲುವು ಸಾಧಿಸುವ ವಿಶ್ವಾಸವಿದೆ ಎಂದು ಬಿಜೆಪಿ ಅಭ್ಯರ್ಥಿ ಉಮೇಶ್ ಯಾದವ್ ಹೇಳಿದ್ದಾರೆ.

ಮತದಾನ ಮಾಡಲು ಬಿಎಸ್‌ವೈ ಮನವಿ

ಎಲ್ಲ ಮತದಾರರು ಮತದಾನ ಮಾಡುವ ಮೂಲಕ ಪ್ರಜಾಪ್ರಭುತ್ವ ಹಬ್ಬದಲ್ಲಿ ಭಾಗವಹಿಸುವಂತೆ ಮಾಜಿ ಸಿಎಂ, ಬಿಜೆಪಿ ನಾಯಕ ಬಿಎಸ್‌ ಯಡಿಯೂರಪ್ಪ ಮನವಿ ಮಾಡಿದ್ದಾರೆ. “ಭವ್ಯ ಭಾರತದ ಬಲಿಷ್ಠ ಭವಿಷ್ಯಕ್ಕಾಗಿ ತಪ್ಪದೇ ಮತ ಚಲಾಯಿಸಿ, ಪ್ರಜಾಪ್ರಭುತ್ವದ ಈ ಸಂಭ್ರಮದ ಕರ್ತವ್ಯವನ್ನು ನಾವೆಲ್ಲರೂ ಹೆಮ್ಮೆಯಿಂದ ನಿರ್ವಹಿಸೋಣ.” ಎಂದು ತಮ್ಮ ಎಕ್ಸ್‌ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ಕರ್ನಾಟಕ

ಬೆಳಗ್ಗೆಯೇ ಬಿರುಸುಗೊಂಡ ಮತದಾನ

ಉತ್ತರ ಕರ್ನಾಟಕ ಭಾಗದಲ್ಲಿ ಮಧ್ಯಾಹ್ನದ ಬಳಿಕ ಬಿಸಿಲು ಹೆಚ್ಚಾಗುವ ಕಾರಣ, ಜನ ಬೆಳಗ್ಗೆಯೇ ಮತ ಚಲಾಯಿಸಲು ಮುಂದಾಗಿದ್ದಾರೆ. ಹಲವು ಮತಗಟ್ಟೆಗಳಲ್ಲಿ 7 ಗಂಟೆಯಿಂದಲೇ ಮತ ಚಲಾಯಿಸಲು ಜನ ಸರತಿ ಸಾಲಿನಲ್ಲಿ ನಿಂತಿದ್ದಾರೆ.

ಅಜಿತ್ ಪವಾರ್ ಮತದಾನ

ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಅವರು ಬಾರಾಮತಿಯಲ್ಲಿ ಬೆಳಗ್ಗೆಯೇ ಮತದಾನ ಮಾಡಿದರು. ಅಜಿತ್ ಅವರ ಪತ್ನಿ ಸುನೇತ್ರಾ ಮತ್ತು ತಾಯಿ ಬಾರಾಮತಿಯ ಕಾಟೇವಾಡಿ ಮತಗಟ್ಟೆಯಲ್ಲಿ ಮತದಾನ ಮಾಡಿದ್ದಾರೆ.

ಗಮನ ಸೆಳೆದಿರುವ ಕ್ಷೇತ್ರಗಳು

ಗಮನ ಸೆಳೆದಿರುವ ಕ್ಷೇತ್ರಗಳು

ಗುಜರಾತ್‌ನ ಗಾಂಧಿನಗರ ಕ್ಷೇತ್ರದಲ್ಲಿ ಅಮಿತ್ ಶಾ ವಿರುದ್ಧ ಕಾಂಗ್ರೆಸ್‌ನಿಂದ ಸೋನಲ್ ಪಟೇಲ್ ಸ್ಪರ್ಧೆ ಮಾಡಿದ್ದು, ಗಮನ ಸೆಳೆಯುತ್ತಿದೆ.

READ MORE

English summary

Lok Sabha Election 2024 Phase 3 Polling LIVE News in Kannada