Home LATEST NEWS kannada ಇತ್ತೀಚಿನ ಸುದ್ದಿ ಮಠಗಳಿಗೆ ಭೇಟಿ ನೀಡಿ ಸ್ವಾಮೀಜಿಗಳ ಆಶೀರ್ವಾದ ಪಡೆದ ಡಾ. ಕೆ. ಸುಧಾಕರ್‌

ಮಠಗಳಿಗೆ ಭೇಟಿ ನೀಡಿ ಸ್ವಾಮೀಜಿಗಳ ಆಶೀರ್ವಾದ ಪಡೆದ ಡಾ. ಕೆ. ಸುಧಾಕರ್‌

1
0

Source :- ONE INDIA NEWS

Karnataka

oi-Malathesha M

By ಒನ್ ಇಂಡಿಯಾ ಡೆಸ್ಕ್

|

Published: Thursday, March 28, 2024, 22:22 [IST]

Google Oneindia Kannada News

2024ರ
ಲೋಕಸಭೆ
ಚುನಾವಣೆಗೆ
ಭರ್ಜರಿ
ಆರಂಭ
ಸಿಕ್ಕಿದ್ದು,
ಬಿಜೆಪಿ
ನಾಯಕರು
ಅಬ್ಬರದಿಂದ
ಪ್ರಚಾರ
ನಡೆಸುತ್ತಿದ್ದಾರೆ.
ಅದರಲ್ಲೂ

ಬಾರಿ
ಚಿಕ್ಕಬಳ್ಳಾಪುರ
ಲೋಕಸಭಾ
ಕ್ಷೇತ್ರದಿಂದ
ಭಾರಿ
ದೊಡ್ಡ
ಅಂತರದಲ್ಲಿ
ಆಯ್ಕೆಯಾಗಿ
ಬರಲು
ಡಾ.
ಕೆ.
ಸುಧಾಕರ್
ಅವರು
ಸಿದ್ಧತೆ
ನಡೆಸಿದ್ದಾರೆ.
ಇದೇ
ಕಾರಣಕ್ಕೆ
ಚಿಕ್ಕಬಳ್ಳಾಪುರ
ಲೋಕಸಭಾ
ಕ್ಷೇತ್ರ
ವ್ಯಾಪ್ತಿಯಲ್ಲಿ
ಭರ್ಜರಿಯಾಗಿ
ಪ್ರಚಾರವನ್ನು
ನಡೆಸುತ್ತಿದ್ದಾರೆ.
ಪ್ರಚಾರದ
ನಡುವೆ
ಮಠಗಳಿಗೂ
ಭೇಟಿ
ನೀಡಿದ್ದ
ಡಾ.
ಕೆ.
ಸುಧಾಕರ್
ಅವರು
ವಿವಿಧ
ಮಠಗಳ
ಸ್ವಾಮೀಜಿಗಳ
ಬಳಿ
ಆಶೀರ್ವಾದ
ಪಡೆದರು.

ಹೀಗೆ
ಸ್ವಾಮೀಜಿಗಳ
ಆಶೀರ್ವಾದ
ಪಡೆದ
ನಂತರ
ಮಾತನಾಡಿದ
ಡಾ.
ಕೆ.
ಸುಧಾಕರ್
ಅವರು,
ಕೋವಿಡ್‌
ಸಮಯದಲ್ಲಿ
ನಾನು
ತಪ್ಪು
ಮಾಡಿದ್ದೇನೆ
ಎಂಬುದು
ಕೇವಲ
ರಾಜಕೀಯ
ಅಪ
ಪ್ರಚಾರ.
ಬಿಜೆಪಿ
ಸರ್ಕಾರದ
ಅವಧಿಯಲ್ಲಿ
ನಾನು
ತಂದ
ಯೋಜನೆ
ಈಗಿನ
ಸರ್ಕಾರ
ಮುಂದುವರಿಸಿದೆ
ಎಂದು
ಚಿಕ್ಕಬಳ್ಳಾಪುರ
ಲೋಕಸಭೆ
ಕ್ಷೇತ್ರದ
ಬಿಜೆಪಿ
ಅಭ್ಯರ್ಥಿ
ಡಾ.
ಸುಧಾಕರ್‌
ಅವರು
ಹೇಳಿದರು.
ಒಂದು
ವರ್ಷದಿಂದ
ರಾಜ್ಯದಲ್ಲಿ
ಕಾಂಗ್ರೆಸ್‌
ಸರ್ಕಾರ
ಇದೆ.
ಕೋವಿಡ್‌
ಸಮಯದಲ್ಲಿ
ತಪ್ಪಾಗಿದ್ದಿದ್ದರೆ,
ಕ್ರಮ
ಕೈಗೊಳ್ಳಬೇಕಿತ್ತು.
ಇದು
ರಾಜಕೀಯ
ಅಪಪ್ರಚಾರವಾಗಿದ್ದು
ಇದಕ್ಕೆ
ನಾನು
ಅಂಜುವುದಿಲ್ಲ
ಎಂದು
ಇದೇ
ವೇಳೆ
ಡಾ.
ಸುಧಾಕರ್
ಅವರು
ತಿಳಿಸಿದರು.

Lok Sabha Election 2024 Dr K Sudhakar Visited To Temples

ನನ್ನ
ಯೋಜನೆ
ಸಂಪೂರ್ಣ
ಸಕ್ಸಸ್!

ನಾನು
ಆರೋಗ್ಯ
ಸಚಿವನಾಗಿ
ತಂದ
ಯೋಜನೆಗಳ
ಈಗಿನ
ಸರ್ಕಾರ
ಮುಂದುವರಿಸಿದೆ
ಡಯಾಲಿಸಿಸ್‌
ಸೈಕಲ್‌
ದುಪ್ಪಟ್ಟು,
ನಮ್ಮ
ಕ್ಲಿನಿಕ್‌,
ನೇತ್ರ
ಚಿಕಿತ್ಸೆ
ಮೊದಲಾದ
ಯೋಜನೆಗಳನ್ನು
ಈಗಿನ
ಸರ್ಕಾರ
ಮುಂದುವರಿಸಿದೆ.
ಪ್ರತಿ
ಜಿಲ್ಲಾಸ್ಪತ್ರೆ,
ಪ್ರಾಥಮಿಕ
ಆರೋಗ್ಯ
ಕೇಂದ್ರಗಳಲ್ಲಿ
ಹಾಸಿಗೆ
ಹೆಚ್ಚಿಸಲಾಗಿದೆ.
ನಾನು
ಆರೋಗ್ಯ
ಸಚಿವನಾಗಿ
ಕೆಲಸ
ಮಾಡಿದ್ದಕ್ಕೆ
ತೃಪ್ತಿ
ಇದೆ.
ಯಾರಿಗಾದರೂ,
ಅನುಮಾನವಿದ್ದರೆ
ರಸ್ತೆಯಲ್ಲಿ
ಫಲಕ
ಹಿಡಿಯದೆ
ತನಿಖೆ
ನಡೆಸುವ
ಸಂಸ್ಥೆಗೆ
ನೀಡಿ
ನನ್ನ
ತಪ್ಪಿದ್ದರೆ
ಶಿಕ್ಷೆ
ಎದುರಿಸುತ್ತೇನೆ.
ನಾನು
ಅಂತಹ
ಪಾಪದ
ಕೆಲಸ
ಮಾಡಿಲ್ಲ
ಎಂದು
ಡಾ.
ಸುಧಾಕರ್
ಅವರು
ಸ್ಪಷ್ಟನೆ
ನೀಡಿದರು.

ಕೋವಿಡ್ ಸಮಯದಲ್ಲಿ ನಾನು ತಪ್ಪು ಮಾಡಿದ್ದೇನೆಂಬುದು ಅಪಪ್ರಚಾರ:ಕೆ ಸುಧಾಕರ್ಕೋವಿಡ್
ಸಮಯದಲ್ಲಿ
ನಾನು
ತಪ್ಪು
ಮಾಡಿದ್ದೇನೆಂಬುದು
ಅಪಪ್ರಚಾರ:ಕೆ
ಸುಧಾಕರ್

ಗೆಲುವು
ನಮ್ಮದೆ
ಎಂದರು
ಡಾ.
ಸುಧಾಕರ್

ಚಿಕ್ಕಬಳ್ಳಾಪುರ
ಲೋಕಸಭೆ
ಕ್ಷೇತ್ರದ
ದೇವನಹಳ್ಳಿ,
ದೊಡ್ಡಬಳ್ಳಾಪುರ,
ಹೊಸಕೋಟೆ,
ಬಾಗೇಪಲ್ಲಿ,
ಚಿಕ್ಕಬಳ್ಳಾಪುರ,
ನೆಲಮಂಗಲಕ್ಕೆ
ಈಗಾಗಲೇ
ಭೇಟಿ
ನೀಡಿದ್ದು
ಯಲಹಂಕ
ಮತ್ತು
ಗೌರಿಬಿದನೂರಿಗೆ
ಭೇಟಿ
ನೀಡಬೇಕಿದೆ.
ಭೇಟಿ
ನೀಡಿದ
ಕಡೆಗಳಲ್ಲಿ
ಬಿಜೆಪಿ
ನಾಯಕರು
ಹಾಗೂ
ಜೆಡಿಎಸ್‌
ಮುಖಂಡರು
ಉತ್ತಮ
ಸಹಕಾರ
ನೀಡುತ್ತಿದ್ದಾರೆ.
ವಿಧಾನಸಭೆ
ಚುನಾವಣೆಗು

ಚುನಾವಣೆಗೂ
ವಾತಾವರಣದಲ್ಲಿ
ಬಹಳ
ವ್ಯತ್ಯಾಸವಿದೆ.
ಎಲ್ಲರೂ
ಕುಟುಂಬದ
ಸದಸ್ಯರಾಗಿದ್ದು,
ಅವರು
ಕೇಳುವ
ಪ್ರಶ್ನೆಗಳಿಗೆ
ಉತ್ತರ
ನೀಡುವುದು
ನನ್ನ
ಕರ್ತವ್ಯ.
ಕೆಲವರು
ಆಗಿರದ
ಕೆಲಸಗಳ
ಬಗ್ಗೆ
ಪ್ರಶ್ನೆ
ಕೇಳುತ್ತಾರೆ.
ಇವೆಲ್ಲ
ಮೀರಿ,
ನಾವು
ಚುನಾವಣೆ
ಎದುರಿಸುತ್ತಿದ್ದೇವೆ
ಎಂದರು
ಡಾ.
ಕೆ.
ಸುಧಾಕರ್
ಅವರು.

Lok Sabha Election 2024 Dr K Sudhakar Visited To Temples

ಮಠಗಳಿಗೆ
ಡಾ.
ಸುಧಾಕರ್
ಬೇಟಿ

ಪ್ರಧಾನಿ
ಮೋದಿ
ಅವರ
ಜೊತೆ
ಈಗ
ಕೆಲಸ
ಮಾಡಲು
ಅವಕಾಶ
ಸಿಕ್ಕಿದೆ.
ಮುಂದೆ
ಬೇರೆಯವರಿಗೂ
ಅವಕಾಶ
ಸಿಗಬಹುದು.
ಯಾರೂ
ಭಿನ್ನವಾಗಿ
ಮಾತನಾಡದೆ
ಮೋದಿಯವರನ್ನು
ಗೆಲ್ಲಿಸೋಣ
ಎಂಬ
ವಿಚಾರವನ್ನು
ಇದೇ
ವೇಳೆ
ಡಾ.
ಸುಧಾರಕ್
ಅವರು
ತಿಳಿಸಿದರು.
ಬೆಂಗಳೂರಿನ
ವಿಜಯನಗರದ
ಆದಿಚುಂಚನಗಿರಿ
ಶಾಖಾ
ಮಠದಲ್ಲಿ
ಶ್ರೀ
ನಿರ್ಮಲಾನಂದನಾಥ
ಸ್ವಾಮೀಜಿ
ಅವ್ರನ್ನ
ಡಾ.ಸುಧಾಕರ್‌
ಅವರು
ಭೇಟಿಯಾಗಿ
ಆಶೀರ್ವಾದ
ಪಡೆದರು.

ನಂತರ
ತುಮಕೂರಿನ
ಶ್ರೀ
ಸಿದ್ಧಗಂಗಾ
ಮಠಕ್ಕೆ
ಭೇಟಿ
ತ್ರಿವಿಧ
ದಾಸೋಹಿ
ಲಿಂಗೈಕ್ಯ
ಡಾ.ಶಿವಕುಮಾರ
ಸ್ವಾಮೀಜಿಗಳ
ಗದ್ದುಗೆಯ
ದರ್ಶನ
ಪಡೆದರು.

ನಂತರ,
ಪೀಠಾಧೀಶರಾದ
ಪೂಜ್ಯ
ಶ್ರೀ
ಸಿದ್ಧಲಿಂಗ
ಸ್ವಾಮೀಜಿಗಳ
ಆಶೀರ್ವಾದ
ಪಡೆದರು.
ನಂತರ
ನೆಲಮಂಗಲ
ತಾಲೂಕಿನ
ಶ್ರೀ
ಮೇಲಣಗವಿ
ವೀರ
ಸಿಂಹಾಸನ
ಸಂಸ್ಥಾನ
ಮಠಕ್ಕೆ
ಕೂಡ
ಭೇಟಿಯ
ನೀಡಿ
ಪಟ್ಟದ
ಮಲಯ
ಶಾಂತಮುನಿ
ದೇಶೀಕೇಂದ್ರ
ಶಿವಾಚಾರ್ಯ
ಸ್ವಾಮೀಜಿಗಳಿಂದ
ಆಶೀರ್ವಾದ
ಪಡೆದರು.

English summary

Dr K Sudhakar Visited To Temples In Chikkaballapur Lok Sabha Constituency

Story first published: Thursday, March 28, 2024, 22:22 [IST]