Home LATEST NEWS kannada ಇತ್ತೀಚಿನ ಸುದ್ದಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಸಹೋದರನ ವಿರುದ್ಧ ಡಾ. ಮಂಜುನಾಥ್‌ ಸ್ಪರ್ಧೆ: ಡಿ ಕೆ ಶಿವಕುಮಾರ್‌ ಏನಂದ್ರು?

ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಸಹೋದರನ ವಿರುದ್ಧ ಡಾ. ಮಂಜುನಾಥ್‌ ಸ್ಪರ್ಧೆ: ಡಿ ಕೆ ಶಿವಕುಮಾರ್‌ ಏನಂದ್ರು?

1
0

Source :- ONE INDIA NEWS

Karnataka

oi-Reshma P

|

Published: Thursday, March 14, 2024, 14:56 [IST]

Google Oneindia Kannada News

ಬೆಂಗಳೂರು,
ಮಾರ್ಚ್‌
14:
ಬೆಂಗಳೂರು
ಗ್ರಾಮಾಂತರ
ಲೋಕಸಭಾ
ಕ್ಷೇತ್ರದಲ್ಲಿ
ಬಿಜೆಪಿಯಿಂದ
ಡಾ.
ಮಂಜುನಾಥ್
ಅವರ
ಸ್ಪರ್ಧೆಗೆ
ಬಿಜೆಪಿ
ಹೈಕಮಾಂಡ್‌
ಟಿಕೆಟ್‌
ನೀಡಿದೆ.
ಈಗಾಗಲೇ
ಡಿಕೆ
ಬ್ರದರ್ಸ್‌
ಗೆ
ಠಕ್ಕರ್‌
ಕೊಡಲು
ಕಮಲ-ದಳ
ನಾಯಕರು
ತಂತ್ರಗಾರಿಕೆ
ನಡೆಸಿದ್ದು,

ಕುರಿತು
ಉಪಮುಖ್ಯಮಂತ್ರಿ
ಡಿ
ಕೆ
ಶಿವಕುಮಾರ್‌
ಮಾತನಾಡಿದ್ದಾರೆ.


ಕುರಿತು
ಬೆಂಗಳೂರಿನಲ್ಲಿ
ಮಾಧ್ಯಮಗಳ
ಜೊತೆಗೆ
ಮಾತನಾಡಿದ
ಅವರು,
ನಾವು
ಮಂಜುನಾಥ್
ಅವರನ್ನು
ಗೌರವಿಸುತ್ತೇವೆ.
ಅವರು
ಉತ್ತಮ
ವೈದ್ಯರು.
ಅವರಿಗೆ
ನಾವು
ಬೆಂಬಲ
ನೀಡಿದ್ದೆವು.
ಆದರೆ
ರಾಜಕೀಯವೇ
ಬೇರೆ.
ನನ್ನ
ಸಹೋದರ

ಕ್ಷೇತ್ರದಲ್ಲಿ
ಸಂಸದನ
ರೀತಿ
ಕೆಲಸ
ಮಾಡುತ್ತಿಲ್ಲ,
ಗ್ರಾಮ
ಪಂಚಾಯ್ತಿ
ಸದಸ್ಯನಂತೆ
ಜನರ
ಮಧ್ಯೆ
ನಿಂತು
ಕೆಲಸ
ಮಾಡುತ್ತಿದ್ದಾರೆ
ಎಂದು
ತಿಳಿಸಿದರು.

Dr Manjunath Contest from Bangalore Rural Constituency Know What DK Shivakumar Says

ಅಸೂಯೆಯಿಂದ
ಬಿಜೆಪಿ
ಅಪಪ್ರಚಾರ

ಸರ್ಕಾರದ
ಯಶಸ್ಸು
ನೋಡಿ
ಸಹಿಸಲಾಗದೇ
ವಿರೋಧ
ಪಕ್ಷಗಳು
ಸುಳ್ಳು
ಪ್ರಚಾರ
ಮಾಡುತ್ತಿವೆ.
ಪ್ರಸ್ತುತ
ಪರಿಸ್ಥಿತಿಯಲ್ಲಿ
ತಮಿಳುನಾಡಿಗೂ
ಕಾವೇರಿ
ನೀರಿಗೂ
ಏನು
ಸಂಬಂಧ?
ತಮಿಳುನಾಡಿನವರು
ನೀರು
ಬಿಡಿ
ಎಂದು
ಕೇಳಿದ್ದಾರಾ?
ಕೇಳದಿದ್ದರೂ
ನೀರು
ಬಿಡಲು
ನಮಗೆ
ತಲೆ
ಕೆಟ್ಟಿದೆಯಾ?
ಬೆಂಗಳೂರಿಗೆ
ಕುಡಿಯಲು
ನೀರನ್ನು
ಸಮರ್ಪಕವಾಗಿ
ಪೂರೈಸಲು
ನೀರು
ಹರಿಸಲಾಗಿದೆ.
ಬರ
ಪರಿಸ್ಥಿತಿಯನ್ನು
ಸರ್ಕಾರ
ಯಶಸ್ವಿಯಾಗಿ
ನಿಭಾಯಿಸುತ್ತಿದೆಯಲ್ಲ
ಎಂಬ
ಅಸೂಯೆಯಿಂದ
ಅಪಪ್ರಚಾರ
ಮಾಡುತ್ತಿದ್ದಾರೆ.
ಬಿಜೆಪಿ
ಅವರದ್ದು
ಕೇವಲ
ರಾಜಕಾರಣ
ಎಂದು
ವಾಗ್ದಾಳಿ
ನಡೆಸಿದರು.

ಸಂಸ್ಕರಿಸಿದ
ನೀರಿನ
ಪೂರೈಕೆಗೆ
ಜನ
ಮುಂದೆ
ಬರುತ್ತಿದ್ದಾರಾ
ಎಂದು
ಕೇಳಿದಾಗ,
“ಖಂಡಿತವಾಗಿಯೂ
ಜನ
ಇದಕ್ಕೆ
ಮುಂದೆ
ಬಂದಿದ್ದಾರೆ.
ಉದ್ಯಾನವನ,
ಕೈಗಾರಿಕೆಗಳಿಗೆ
ತುರ್ತು
ಪರಿಸ್ಥಿತಿಯಲ್ಲಿ

ನೀರನ್ನು
ನೀಡಲಾಗುತ್ತಿದೆ”
ಎಂದು
ತಿಳಿಸಿದರು.

ಕೇಂದ್ರದಿಂದ
ಮೇಕೆದಾಟು
ಯೋಜನೆಗೆ
ಅನುಮತಿ
ಕೊಡಿಸಲಿ

ಬರ
ಪರಿಸ್ಥಿತಿಯನ್ನು
ಸರ್ಕಾರ
ಯಶಸ್ವಿಯಾಗಿ
ನಿಭಾಯಿಸುತ್ತಿರುವುದನ್ನು
ಸಹಿಸಲಾಗದೇ
ಬಿಜೆಪಿ
ಸುಳ್ಳು
ಪ್ರಚಾರಕ್ಕೆ
ಮುಂದಾಗಿದೆ.
ನೀರಿನ
ವಿಚಾರದಲ್ಲಿ
ರಾಜಕೀಯ
ಮಾಡೋದು
ಬಿಟ್ಟು
ಕೇಂದ್ರ
ಸರ್ಕಾರದಿಂದ
ಮೇಕೆದಾಟು
ಯೋಜನೆಗೆ
ಅನುಮತಿ
ಕೊಡಿಸಲಿ”
ಎಂದು
ಡಿಸಿಎಂ
ಡಿ
ಕೆ
ಶಿವಕುಮಾರ್
ಸವಾಲು
ಹಾಕಿದರು.
ಅಲ್ಲದೇ
ತಮಿಳುನಾಡಿಗೆ
ಕಾವೇರಿ
ನೀರು
ಬಿಡಲಾಗಿದೆ
ಎಂಬ
ಸುಳ್ಳು
ಆರೋಪ
ಮಾಡಿರುವ
ಬಿಜೆಪಿಯನ್ನು
ತರಾಟೆಗೆ
ತೆಗೆದುಕೊಂಡರು.

ಕಾವೇರಿ
ನೀರು
ಪೂರೈಕೆ
ಪ್ರದೇಶಗಳಲ್ಲಿ
ನೀರಿನ
ಅಭಾವವಿಲ್ಲ.
ಕೊಳವೆ
ಬಾವಿಗಳು
ಬತ್ತಿರುವ
ಕಡೆಗಳಲ್ಲಿ
ಮಾತ್ರ
ಅಭಾವ
ಹೆಚ್ಚಾಗಿದೆ.
ಆದರೆ

ವಿಚಾರದಲ್ಲಿ
ಬಿಜೆಪಿಯವರು
ರಾಜಕೀಯ
ಮಾಡುತ್ತಿದ್ದಾರೆ.
ತಮಿಳುನಾಡಿಗೆ
ನೀರು
ಬಿಟ್ಟಿದ್ದೇವೆ
ಎಂಬುದು
ಸುಳ್ಳು.
ನಮ್ಮಲ್ಲಿ
ನೀರೇ
ಇಲ್ಲದಿರುವಾಗ
ತಮಿಳುನಾಡಿಗೆ
ಎಲ್ಲಿಂದ
ನೀರು
ಬಿಡಲು
ಸಾಧ್ಯ?
ಮೇಲಾಗಿ
ಅವರು
ನೀರು
ಕೇಳಿಯೇ
ಇಲ್ಲ.
ಬಿಜೆಪಿಯದು
ಕೇವಲ
ರಾಜಕೀಯ
ಗಿಮಿಕ್.
ರಾಜ್ಯ
ಬಿಜೆಪಿ
ನಾಯಕರು
ರಾಜಕೀಯ
ಬಿಟ್ಟು
ಮೇಕೆದಾಟು
ಯೋಜನೆಗೆ
ಕೇಂದ್ರ
ಬಿಜೆಪಿ
ಸರ್ಕಾರದಿಂದ
ಅನುಮತಿ
ಕೊಡಿಸಲಿ
ಎಂದು
ಹೇಳಿದರು.

English summary

DK Shivakumar Said That Let the BJP give permission to the goat herding scheme from the centre,

Story first published: Thursday, March 14, 2024, 14:56 [IST]